

ಸರಗೂರು : ಪ್ರತಿಯೊಬ್ಬರು ತಮ್ಮ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ.ತಾವು ಮಾಡುವ ಕೆಲಸದ ಸ್ಥಳಗಳಲ್ಲಿ ತಮ್ಮ ಕಣ್ಣುಗಳನ್ನು ಆರೈಕೆ ಮಾಡಿಕೊಳ್ಳಿ. ಪ್ರತಿ ೨೦ ನಿಮಿಷಗಳಿಗೊಮ್ಮೆ ಕಣ್ಣಿಗೆ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಕೆ.ಆರ್.ಆಸ್ಪತ್ರೆಯ ಶಸ್ತçಚಿಕಿತ್ಸಾ ತಜ್ಞ ಡಾ.ಚೇತನ್ ಕುಮಾರ್ ತಿಳಿಸಿದರು.
ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವತಿಯಿಂದ, ವಿಶ್ವದೃಷ್ಟಿ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ರಂದು ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾರಿನಂಶವಿರುವ ಸೊಪ್ಪು ಮತ್ತು ತರಕಾರಿಗಳನ್ನು ಸೇವಿಸಿ, ಪ್ರೋಟಿನ್‌ಯುಕ್ತ ಸಮತೋಲನ ಆಹಾರವನ್ನು ಸೇವಿಸಿದರೆ ಕಣ್ಣಿಗೆ ರಕ್ಷಣೆ ಸಿಗುತ್ತದೆ. ನಾನು 2800 ಕಣ್ಣಿನ ಶಸ್ತçಚಿಕಿತ್ಸೆಯನ್ನು ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಮಾಡಿರುತ್ತೇನೆ. ಒಂದೂ ಕೂಡ ಯಾವುದೇ ವೈಪಲ್ಯವಿಲ್ಲ ಎಂದು ಹೇಳಲಿಕ್ಕೆ ಇಚ್ಚಿಸುತ್ತೇನೆ ಎಂದರು.
ಆಸ್ಪತ್ರೆಯ ನಿರ್ದೇಶಕ ಡಾ ರವೀಂದ್ರನಾಥ್ ಮಾತನಾಡಿ ನನ್ನ ಗುರುಗಳು ಈ ಆಸ್ಪತ್ರೆಯಲ್ಲಿ ನಾನು ಸೇವೆ ಮಾಡಲು ಸದಾ ನಿಮ್ಮೊಂದಿಗೆ ಸಿದ್ದನಿದ್ದೇನೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಕಣ್ಣಿನ ನರರೋಗ ತಜ್ಞ ಡಾ.ವಿನಯïಕುಮಾರ್ ಇವರು ಮಾತನಾಡಿ ನಮ್ಮ ಕಣ್ಣಿನ ಆರೈಕೆ ನಾವೇ ಮಾಡಿಕೊಳ್ಳಬೇಕು.ಪ್ರತಿಯೊಬ್ಬರು 40 ವರ್ಷ ಆದ ನಂತರ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗ್ರಾಮೀಣ ಮಟ್ಟದಲ್ಲಿ ಇಂತಹ ಸೇವಾ ಆಸ್ಪತ್ರೆ ಇರೋದು ನಮ್ಮೆಲ್ಲರ ಪುಣ್ಯ. ವಿಶ್ವ ಸಂಸ್ಥೆಯ ಈ ವರ್ಷ ಘೋಷಿಸಿರುವ ಘೋಷವಾಕ್ಯವಾದ “ ಪ್ರತಿ ಕತೆಯನ್ನು ಲೆಕ್ಕಿಸದೇ ನಿಮ್ಮ ಕಣ್ಣನ್ನು ಪ್ರೀತಿಸಿ” ಎಂಬುದರ ಬಗ್ಗೆ ಹೇಳುತ್ತಾ ಕಣ್ಣಿನ ದೋಷ ನಿಯಂತ್ರಿಸಲು ಹಲವಾರು ಕಾರ್ಯ ಕ್ರಮಗಳನ್ನು ವಿವೇಕಾನಂದ ಸ್ಮಾರಕ ಆಸ್ಪತ್ರೆಯು ಕಣ್ಣಿನ ತಪಾಷಣೆ ಶಿಬಿರಗಳನ್ನು ಅಯೋಜಿಸಿ ಕಣ್ಣಿನ ತೊಂದರೆ ಇರುವವರನ್ನು ಗುರುತಿಸಿ ಶಸ್ತç ಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಇಂತಹ ಶಿಬಿರಗಳನ್ನು ಸಾರ್ವಜನಿಕರು ಹೆಚ್ಚು ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.