ಸೇಡಂನಲ್ಲಿ ಪೊಲೀಸ್ ಠಾಣೆ ನಿರ್ಮಾಣ ಮಾಡಿ

03-SDMOCT-02
ಸೇಡಂ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾದ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
Published on

ಸೇಡಂ: ಪಟ್ಟಣದ ಪೊಲೀಸ್ ಠಾಣೆ ಕಟ್ಟಡ ತೀರಾ ಹಳೆಯದಾಗಿದ್ದು, ಹೊಸ ಕಟ್ಟಡ ನಿರ್ಮಿಸಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆಗೆ ಮುಂದಾದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಆರಕ್ಷಕರು ವಶಕ್ಕೆ ಪಡೆದ ಪ್ರಸಂಗ ಮಂಗಳವಾರ ಜರುಗಿದೆ.

ಕರವೇ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ್ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಠಾಣೆ ಮುಂದೆ ಕುಳಿತು ಪ್ರತಿಭಟನೆ ಆರಂಭಿಸಿ, ಜನ ಸಾಮಾನ್ಯರಿಗೆ ರಕ್ಷಣೆ ನೀಡುವ ಪೊಲೀಸರಿಗೆ ಮಳೆ ಬಂದರೆ ರಕ್ಷಣೆ ಇಲ್ಲದಂತಾಗಿದೆ. ಸಂಪೂರ್ಣ ಮಳೆ ನೀರು ಠಾಣೆಗೆ ನುಗ್ಗುವುದರಿಂದ ದಾಖಲೆ ಸೇರಿ ಇನ್ನಿತರ ಸಾಮಗ್ರಿ ನೀರು ಪಾಲಾಗುತ್ತಿವೆ. ಕಟ್ಟಡದೊಳಗೆ ನುಗ್ಗಿದ ಮಳೆ ನೀರನ್ನು ಹೊರ ಹಾಕುವುದೇ ದೊಡ್ಡ ಕೆಲಸವಾಗಿದೆ. ಹೀಗಾಗಿ ಕೂಡಲೇ ಹೊಸ ಕಟ್ಟಡ ನಿರ್ಮಿಸಬೇಕು. ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡುವವರೆಗೂ ಪ್ರತಿಭಟನೆ ವಾಪಸ್ ಪಡೆಯಲ್ಲ ಎಂದು ಪಟ್ಟು ಹಿಡಿದರು.

ಬಳಿಕ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು, ಮನವಿ ಸ್ವೀಕರಿಸಿ ಕಳಿಸಿದರು.

ಪ್ರಮುಖರಾದ ಮಹೇಶ ಪಾಟೀಲ್, ದೇವು ನಾಟೀಕಾರ, ಶ್ರೀನಿವಾಸರೆಡ್ಡಿ, ಚಂದ್ರಶೇಖರ ಪೂಜಾರಿ, ಪ್ರವೀಣ್ ಕೋಡ್ಲಾ, ಭೀಮಯ್ಯ ಗುತ್ತೇದಾರ್, ಗುಂಡಪ್ಪ ಪೂಜಾರಿ, ಮಲ್ಲಿಕಾರ್ಜುನ ಕಾಕಲವಾರ, ರಾಘವೇಂದ್ರ ಕಡಗಂಚಿ, ಮಹೇಶರೆಡ್ಡಿ, ಚಂದ್ರಶೇಖರ ಮಡಿವಾಳ, ರವಿಸಿಂಗ್, ಭೀಮಾಶಂಕರ ನಾಟೀಕಾರ, ಚನ್ನಬಸಪ್ಪ ಬೆನಕನಹಳ್ಳಿ, ಆಶಪ್ಪ ತಳವಾರ, ರವಿ ಗುತ್ತೇದಾರ್, ಸುಭಾಷ ಇಮಡಾಪುರ, ಅನೀಲ ನೀಲಿ, ಬಸವರಾಜ, ಭಗವಂತು ನಾಟೀಕಾರ, ಶ್ರೀನಾಥ ಕಲಕಂಭ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net