ಭಾರತ ಇಸ್ಲಾಮಿಕರಣ ಯಾವತ್ತೂ ಸಾಧ್ಯವಿಲ್ಲ

29-SDMSEP-01
ಸೇಡಂ ತಾಲೂಕಿನ ಹಂಗನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಮೌನೇಶ ಬಡಿಗೇರ, ಸೂರ್ಯಕಾಂತ ಮಾಸ್ತರ್, ವಿಜಯಕುಮಾರ ಸಾಹು ಇದ್ದರು.
Published on

ಸೇಡಂ: ದಿನ ಕಳೆದಂತೆ ಹಿಂದು ವಿರೋಧಿ ದುಷ್ಟ ಶಕ್ತಿಗಳು ಹೆಚ್ಚಾಗುತ್ತಿದ್ದು, ಧರ್ಮ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಹಂಗನಹಳ್ಳಿಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಶ್ರೀ ರಾಮ ಸೇನೆ ಗ್ರಾಮ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲವರು ಭಾರತವನ್ನು ಇಸ್ಲಾಂ ರಾಷ್ಟçವನ್ನಾಗಿಸುವ ಹುಚ್ಚು ಕನಸು ಹೊಂದಿದ್ದಾರೆ. ಆದರೆ ಅದ್ಯಾವತ್ತಿಗೂ ಸಾಧ್ಯವಿಲ್ಲ. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದರೆ, ಕೆಲವರು ವಿದೇಶಕ್ಕೆ ಹೋಗಿ ಭಾರತ ಆಪತ್ತಿನಲ್ಲಿದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಗುಲಾಮಗಿರಿ ಮನಸ್ಥಿತಿ ಹೊಂದಿರುವ ಕಾಂಗ್ರೆಸ್, ಯಾವತ್ತಿಗೂ ಹಿಂದುಗಳ ಶ್ರೇಯೋಭಿವೃದ್ಧಿ ಬಯಸಿಲ್ಲ. ದೇಶ ಮತ್ತು ಧರ್ಮಕ್ಕಾಗಿ ಕೆಲಸ ಮಾಡುವವರ ಮೇಲೆಯೇ ಹೆಚ್ಚು ಪ್ರಕರಣ ದಾಖಲಿಸಲಾಗುತ್ತಿದೆ. ಇದರಿಂದ ಹಿಂದು ಯುವಕರು ಹೆದರುವ ಅಗತ್ಯವಿಲ್ಲ. ಧರ್ಮ, ಗೋ ರಕ್ಷಣೆ, ಮತಾಂತರ ತಡೆಯುವುದು, ಲವ್ ಜಿಹಾದ್‌ನಿಂದ ಹಿಂದು ಯುವತಿಯರ ರಕ್ಷಣೆ ನಮ್ಮ ಆದ್ಯತೆಯಾಗಿರಬೇಕು ಎಂದು ಕರೆ ನೀಡಿದರು.

ಶ್ರೀ ರಾಮ ಸೇನೆ ತಾಲೂಕು ಅಧ್ಯಕ್ಷ ಮೌನೇಶ ಬಡಿಗೇರ, ಗ್ರಾಮ ಘಟಕ ಅಧ್ಯಕ್ಷ ವಿಜಯಕುಮಾರ ಸಾಹು, ಪ್ರಮುಖರಾದ ಸೂರ್ಯಕಾಂತ ಮಾಸ್ತರ್, ದೇವಿಂದ್ರಪ್ಪ ಹೊಳಕುಂದಿ, ಶಂಕರಲಿಂಗ ತಳವಾರ, ಮೈಬಣ್ಣ ಕುಂಬಾರ, ಪರಮೇಶ್ವರ ಮಾಲಿಪಾಟೀಲ್, ರಾಮಶೆಟ್ಟಿ ಬಡಿಗೇರ, ಪಕೀರಪ್ಪ ಮಡಿವಾಳ, ಮರೆಪ್ಪ ಕಲಬುರಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net