ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ವಕೀಲನಿಗೆ ಸಹಕರಿಸಿದಾತನ ಬಂಧನ

IMG-20211028-WA0000
Published on

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಕೆ.ಎಸ್.ಎನ್.ರಾಜೇಶ್ ಭಟ್ ಅವರಿಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದ ಬೊಂದೆಲ್ ನಿವಾಸಿ ಅನಂತ ಭಟ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರು ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ಭಟ್ ರವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಪೊಲೀಸರ ದಸ್ತಗಿರಿಗೆ ಸಿಗದೇ ತಲೆಮರೆಸಿಕೊಳ್ಳಲು ಸಹಕರಿಸಿದ್ದಾರೆ. ಪ್ರಕರಣ ವರದಿಯಾದ ಕೂಡಲೇ ಇವರು ಆರೋಪಿ ರಾಜೇಶ್ ಭಟ್ ನ ವಾಹನದಲ್ಲಿ ದೂರದ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ನಂತರ ಆರೋಪಿ ರಾಜೇಶ್ ಭಟ್ ರವರ ಕಾರು ಮತ್ತು ಅವರು ಬಳಸುತ್ತಿದ್ದ ಮೊಬೈಲ್ ಫೋನ್ ನ್ನು ಅಜ್ಞಾತ ಸ್ಥಳದಲ್ಲಿ ಬಚ್ಚಿಟ್ಟು ಪೊಲೀಸರಿಗೆ ಸಿಗದಂತೆ ಸಹಕರಿಸಿರುತ್ತಾರೆ. ಆದ್ದರಿಂದ ಈ ಪ್ರಕರಣಕ್ಕೆ ಸಂಬಂದಪಟ್ಟಂತೆ ಅನಂತ್ ಭಟ್ ರವರ ಪಾತ್ರವನ್ನು ತಿಳಿದುಕೊಳ್ಳಲು ಹಾಗೂ ಪ್ರಮುಖ ಆರೋಪಿ ರಾಜೇಶ್ ಭಟ್ ರವರನ್ನು ಪತ್ತೆ ಹಚ್ಚುವ ಸಲುವಾಗಿ ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿ ಅನಂತ್ ಭಟ್ ರವರಿಂದ ಪ್ರಮುಖ ಆರೋಪಿ ರಾಜೇಶ್ ಭಟ್ ಎಂಬವರು ತಪ್ಪಿಸಿಕೊಳ್ಳಲು ಉಪಯೋಗಿಸಿದ ರಾಜೇಶ್ ಭಟ್ ರವರ ಕಾರು ಮತ್ತು ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net