ಹಣ ಕೊಡುವುದಾಗಿ ನಂಬಿಸಿ ಲೈಂಗಿಕ ಹಿಂಸೆ

crime
Published on

ಹುಬ್ಬಳ್ಳಿ: ಮಹಿಳೆಯ ಹಣವನ್ನು ಫೈನಾನ್ಸ್‌ಗೆ ತುಂಬದೇ ಮೋಸ ಮಾಡಿದಲ್ಲದೆ, ಮಹಿಳೆಗೆ ಹಣ ಕೊಡುವುದಾಗಿ ನಂಬಿಸಿ ಹುಬ್ಬಳ್ಳಿಗೆ ಕರೆಯಿಸಿ ಲೈಂಗಿಕ ಹಿಂಸೆ ನೀಡಿದ ಆರೋಪದಡಿ ಕ್ಯಾಷ್ ಕಲೆಕ್ಟರೊಬ್ಬನ ವಿರುದ್ಧ ಇಲ್ಲಿಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗರಾಜ ಡಿ. ವಿರುದ್ಧ ಪ್ರಕರಣ ದಾಖಲಾಗಿದೆ. ಫೈನಾನ್ಸ್ ಒಂದರಲ್ಲಿ 35 ಸಾವಿರ ರೂ. ಸಾಲ ಪಡೆದ ಮಹಿಳೆಯೊಬ್ಬರು ಹಣ ತುಂಬುತ್ತ ಬಂದರೂ ನಾಗರಾಜ ಫೈನಾನ್ಸ್‌ಗೆ ತುಂಬಿಲ್ಲ. ನಂತರ ಮಹಿಳೆ ಕೇಳಿದಾಗ ಹುಬ್ಬಳ್ಳಿ ಲಾಡ್ಜ್‌ಗೆ ಕರೆಯಿಸಿ, ಎಳೆದಾಡಿ ಹಿಂಸೆ ನೀಡಿದ್ದಾರೆ ಎಂದು ಮಹಿಳೆ ತಾನು ನೀಡಿದ ದೂರಿನಲ್ಲಿ ವಿವರಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net