ಎಂಡೋ ಸಂತ್ರಸ್ತನಿಗೆ ವೃದ್ಧನಿಂದ ಲೈಂಗಿಕ ದೌರ್ಜನ್ಯ

sexual assualt
Published on

ಪುತ್ತೂರು: ಸಂಜೆ ವಾಕಿಂಗ್ ಹೋಗುತ್ತಿದ್ದ ಎಂಡೋ ಪೀಡಿತ ಯುವಕನ ಮೇಲೆ ಮುರ ನಿವಾಸಿ ವೃದ್ಧ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಪುತ್ತೂರು ತಾಲೂಕಿನ ಕಬಕ ಎಂಬಲ್ಲಿ ಶುಕ್ರವಾರ ನಡೆದಿದೆ.

ಆರೋಪಿ ಸ್ಥಳೀಯ ನಿವಾಸಿ ಮಹಮ್ಮದ್ ಹನೀಫ್(61)ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಯುವಕ ಪ್ರತಿನಿತ್ಯ ಸಂಜೆ ವಾಕಿಂಗ್ ಹೋಗುತ್ತಿದ್ದು, ಎಂದಿನಂತೆ ಶುಕ್ರವಾರ ವಾಕಿಂಗ್ ಹೋಗುತ್ತಿದ್ದಾಗ ಮುರ ರೈಲ್ವೆ ಜಂಕ್ಷನ್ ಬಳಿ ಕಬ್ಬು ನೀಡುವುದಾಗಿ ಹೇಳಿ ಪಕ್ಕದಲ್ಲಿರುವ ಪೊದೆ ಬಳಿ ಕರೆದೊಯ್ದ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಸಂತ್ರಸ್ತ ಮನೆಗೆ ಬಂದಾಗ ಆತನ ಅಂಗಿಯಲ್ಲಿ ಮಣ್ಣು ಇರುವುದನ್ನು ಗಮನಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆತನ ತಂದೆ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net