

ಕಾಸರಗೋಡು: ಹದಿನೇಳರ ಹರೆಯದ ಬಾಲಕಿಯನ್ನು ಕಾರಿನಲ್ಲಿ ವಿವಿಧೆಡೆ ಕರೆದೊಯ್ದು ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪಳ್ಳಿಕೆರೆ ಚೇಟುಕುಂಡು ನಿವಾಸಿ ಮಹಮ್ಮದ್ ಆಶಿಕ್ ಎಂಬಾತನನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಯನ್ನು ಆಮಿಷವೊಡ್ಡಿ ಕಾರಿನಲ್ಲಿ ವಿವಿಧೆಡೆ ಕರೆದೊಯ್ದ ಆರೋಪಿ, ನಂತರ ಬೇಕಲಕೋಟೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.