

ಖಾನಾಪುರ: ತಾಲೂಕಿನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾ ನಿಸಾರ್ ಅಹ್ಮದ್ ಫಕ್ರುಸಾಬ್ ಚಾಪ್ಗಾವಿಗೆ (68) ಪೋಕ್ಸೋ ನ್ಯಾಯಾಲಯ 20 ವರ್ಷ ಜೆಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಸಿ ತೀರ್ಪು ಪ್ರಕಟಿಸಿದೆ.
2024ರ ಫೆಬ್ರವರಿ 24ರಂದು 4 ವರ್ಷದ ಬಾಲಕಿಗೆ ಚಾಕಲೇಟ್ ಕೊಟ್ಟು ಪುಸಲಾಯಿಸಿ ತನ್ನ ಮನೆಗೆ ಕರೆದು ನಿಸಾರ್ ಅಹ್ಮದ್ ಫಕ್ರುಸಾಬ್ ಚಾಪ್ಗಾವಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆರೋಪಿ ವಿರುದ್ಧ 2024ರ ಫೆಬ್ರವರಿ 27ರಂದು ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ನ್ಯಾಯಾಲಯದಿಂದ ಫೆ.28ರಂದು ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ನಂದಗಡ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಸಿ. ಪಾಟೀಲ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರ್.ಎಸ್. ಕೆಮಾಲೆ
ತನಿಖಾ ಸಹಾಯಕರಾಗಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗುರುವಾರ ಪೋಕ್ಸೋ ನ್ಯಾಯಾಲಯದ ನ್ಯಾಯಾೀಶೆ ಸಿ.ಎಂ. ಪುಷ್ಪಲತಾ ಶಿಕ್ಷೆ ಮತ್ತು ದಂಡ ವಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.