ಕಾಸರಗೋಡು ಯುವಕನಿಗೆ ತಲಪಾಡಿಯಲ್ಲಿ ಕಜ್ಜಾಯ!

Sexual harassement
ಸಾಂದರ್ಭಿಕ ಚಿತ್ರ
Published on

ಮಂಗಳೂರು: ಕೇರಳ ಕರ್ನಾಟಕ ಗಡಿಭಾಗದ ತಲಪಾಡಿಯಲ್ಲಿ ಕಾಸರಗೋಡಿನಿಂದ ಬಂದು ʼಘನಂದಾರಿʼ ಕೆಲಸ ಮಾಡಿ ಪರಾರಿಯಾಗಿದ್ದ ಭೂಪನಿಗೆ ಶನಿವಾರ ಸ್ಥಳೀಯರು ಸೂಕ್ತ ಆತಿಥ್ಯ ನೀಡಿದ್ದಾರೆ.
ಅದೇನು ವಿಚಾರ ಅಂತೀರಾ!
ತಲಪಾಡಿ ಎನ್ನುವುದು ಕೇರಳ,ಕರ್ನಾಟಕದ ಗಡಿಭಾಗ. ಇಲ್ಲಿ ಕಾಸರಗೋಡು ಜಿಲ್ಲೆಯ ಅನೇಕರು ಬಂದು ಹೋಗುವುದು ಸಾಮಾನ್ಯ. ಹಾಗೆ ಕೆಲ ದಿನಗಳ ಹಿಂದೆ ಆಗಮಿಸಿದ್ದ ಯುವಕನೋರ್ವ ಸ್ಥಳೀಯ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ. ಕಾಸರಗೋಡು ಜಿಲ್ಲೆಯ ಮಂಜೇಶ್ವರದಿಂದ ಬಂದು ಕಳೆದ ಶನಿವಾರ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿ ಮುಸ್ತಾಫ(೧೮)ನನ್ನು ಸ್ಥಳೀಯರು ಹಿಡಿದು ಸದ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವತಿಯ ದೂರಿನಂತೆ ಸಿಸಿಟಿವಿ ಪರಿಶೀಲಿಸಿ, ಆತ ಬರಲು ಸ್ಥಳೀಐರು ಕಾದಿದ್ದರು. ಕಳೆದ ಶನಿವಾರ ತಲಪಾಡಿಯ ಒಳರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುವಾಗ ಯುವತಿಗೆ ಮುಸ್ತಾಫ ಕಿರುಕುಳ ನೀಡಿದ್ದ ಎನ್ನಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net