ಲೈಂಗಿಕ ಕಿರುಕುಳ ಪ್ರಕರಣ ವಿಚಾರಣೆಗೆ ಮಾನ್ವಿ ತಹಸೀಲ್ದಾರ್, ಶಿರಸ್ತೇದಾರ್ ಹಾಜರ್

Woman Harrasment
Published on

ರಾಯಚೂರು: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ವಿ ತಹಸೀಲ್ದಾರ್ ಅಮರೇಶ ಬಿರಾದಾರ್ ಹಾಗೂ ಶಿರಸ್ತೇದಾರ್ ಡಿ.ವಾಸವಿ ವಿಚಾರಣೆಗೆಂದು ಸಹಾಯಕ ಆಯುಕ್ತರ ಕಚೇರಿಗೆ ಗುರುವಾರ ಬಂದು, ತಮ್ಮ ತಮ್ಮ ಹೇಳಿಕೆ ದಾಖಲಿಸಿದರು.

ವಿಚಾರಣೆ ನಂತರ ಅಮರೇಶ ಬಿರಾದಾರ್ ಪ್ರತಿಕ್ರಿಯೆಗೆ ನಿರಾಕರಿಸಿದರು. ಪ್ರತಿಕ್ರಿಯಿಸಿದ ಶಿರಸ್ತೇದಾರ್ ಡಿ.ವಾಸವಿ, ತಮಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಸಂಬಂಧಿಸಿದಂತೆ ದಾಖಲೆಗಳಿವೆ. ಅವುಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದಾಗಿ ಹೇಳಿದರು.

ನಡೆದದ್ದೇನು?: ಮಾನ್ವಿ ತಹಸೀಲ್ದಾರ್ ಅಮರೇಶ ಬಿರಾದಾರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅದೇ ಕಚೇರಿಯ ಶಿರಸ್ತೇದಾರ್ ಡಿ.ವಾಸವಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್‌ಗೆ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ, ವರದಿ ನೀಡುವಂತೆ ನಿರ್ದೇಶಿಸಿ ಜಿಲ್ಲಾ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ ಅಧ್ಯಕ್ಷೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಇಂದಿರಾಗೆ ಬುಧವಾರ ಸಂಜೆ ಸೂಚಿಸಿದ್ದರು. ಈ ಕಾರಣದಿಂದ ಇಬ್ಬರೂ ವಿಚಾರಣೆಗೆ ಗುರುವಾರ ಹಾಜರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net