

ಶಿಗ್ಗಾಂವಿ: ವಿದ್ಯಾಥಿರ್ನಿಯೊಬ್ಬಳಿಗೆ ಪ್ರೀತಿಸು ಎಂದು ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ತಾಲೂಕಿನ ತಡಸ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ತಡಸ ಗ್ರಾಮದ ಇಮಾಮಹುಸೇನ ಮಹಬೂಬಅಲಿ ಮಹಲ್ದಾರ್ (22) ಎಂಬುವನ ವಿರುದ್ಧ ದೂರು ದಾಖಲಾಗಿರುವುದು.
ಈತ ವಿದ್ಯಾಥಿರ್ನಿಗೆ ನೀನು ನನ್ನನ್ನು ಪ್ರೀತಿ ಮಾಡಬೇಕು. ಇಲ್ಲವಾದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಹೆದರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.