ಯತೀಂಖಾನದಲ್ಲಿ ಅನಾಥ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

aropi
Published on

ಮಂಗಳೂರು: ಕುಂಪಲ ಯತೀಂಖಾನದಲ್ಲಿದ್ದ ಅನಾಥ ಮಕ್ಕಳ ಮೇಲೆ ಅಲ್ಲಿನ ಉಸ್ತಾದ್ ಲೈಂಗಿಕ ದೌರ್ಜನ್ಯ ನಡೆಸಿರುವ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಯತೀಂಖಾನದ ಉಸ್ತಾದ್ ಅಯೂಬ್(52) ನನ್ನು ಬಂಧಿಸಲಾಗಿದೆ.

ಮಾರ್ಚ್‌ನಲ್ಲಿ ಮಕ್ಕಳ ಕೌನ್ಸೆಲಿಂಗ್ ನಡೆಸಿದಾಗ ಪ್ರಕರಣದ ಸುಳಿವು ಪಡೆದಿದ್ದ ಪೊಲೀಸರು. ಬಾಲಕರ ವಿಸ್ತೃತ ಸಮಾಲೋಚನೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ನಾಲ್ಕು ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿದ್ದು, ಇನ್ನಷ್ಟು ಮಂದಿಗೆ ತೊಂದರೆ ನೀಡಿರುವ ಶಂಕೆ ವ್ಯಕ್ತವಾಗಿದೆ.

ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net