ಹೊಲಿಗೆ, ವಿಡಿಯೋಗ್ರಾಫಿ ತರಬೇತಿ ಶಿಬಿರ: ನ.4ರೊಳಗೆ ಅರ್ಜಿ ಸಲ್ಲಿಸಿ

training-logo-png-transparent
Published on

ಮಂಡ್ಯ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪರಿಶಿಷ್ಟ ಜಾತಿಯ ಯುವಕ/ಯುವತಿಯರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ದೃಷ್ಟಿಯಿಂದ ಹೊಲಿಗೆ ಮತ್ತು ವಿಡಿಯೋಗ್ರಾಫಿ ತರಬೇತಿ ಶಿಬಿರವನ್ನು ಬೆಂಗಳೂರು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಎಸ್‌ಎಸ್‌ಎಲ್ಸಿ(ಉತ್ತೀರ್ಣ/ಅನುತ್ತೀರ್ಣ) ವಿದ್ಯಾರ್ಹತೆ ಹೊಂದಿದವರು ಹೊಲಿಗೆ ತರಬೇತಿ ಶಿಬಿರವನ್ನು ನ.7 ರಿಂದ 26 ರ ವರೆಗೆ ಮತ್ತು ದ್ವಿತೀಯ ಪಿಯುಸಿ(ಉತ್ತೀರ್ಣ/ಅನುತ್ತೀರ್ಣ) ವಿದ್ಯಾರ್ಹತೆಯನ್ನು ಹೊಂದಿದವರು ನ.15 ರಿಂದ 26ರವರಗೆ ವಿಡಿಯೋಗ್ರಾಫಿ ತರಬೇತಿ ಶಿಬಿರವನ್ನು ಕನಿಷ್ಟ 18 ರಿಂದ 40 ವರ್ಷ ವಯೋಮಿತಿಯವರು ಭಾಗವಹಿಸಬಹುದು.

ಅರ್ಹರು ನ.4ರೊಳಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಯೊಂದಿಗೆ ಸಲ್ಲಿಸಬಹುದೆಂದು ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net