ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ

bca
Published on

ಹುಬ್ಬಳ್ಳಿ: ದಾಜಿಬಾನಪೇಟೆಯ ಭಾರತೀಯ ಕಂಪ್ಯೂಟರ್ ಅಕಾಡೆಮಿಯಲ್ಲಿ ಭಾರತ ಸರ್ಕಾರದ ಜವಳಿ ಮಂತ್ರಾಲಯದ ಸಮರ್ಥ ಜವಳಿ ವಲಯ ಕೌಶಲ ಅಭಿವೃದ್ಧಿ ಯೋಜನೆಯಡಿ ಆದರ್ಶ ಅಸೋಸಿಯೇಷನ್ ಸಂಸ್ಥೆಯ ಸಹಯೋಗದೊಂದಿಗೆ ನಡೆಸಿದ 60 ದಿನಗಳ ಕಾಲ ಯಾಂತ್ರಿಕೃತ ಹೊಲಿಗೆ ತರಬೇತಿ ಪೂರ್ಣಗೊಳಿಸಿದ 27 ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಎಸಿಪಿ ಬಲ್ಲಪ್ಪ ನಂದಗಾಂವಿ ಹಾಗೂ ಗಂಗಾವತಿ ಸಿಲ್ಕ್ ಪ್ಯಾಲೇಸ್​ನ ಮಾಲೀಕ ಆನಂದ ಕಮತಗಿ ಪ್ರಮಾಣಪತ್ರಗಳನ್ನು ವಿತರಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ ಜಿತೂರಿ ಮಾತನಾಡಿ, ನಮ್ಮಲ್ಲಿ ಹೊಲಿಗೆ ತರಬೇತಿ ಪಡೆದವರಿಗೆ ಭಾರತ ಸರ್ಕಾರದ ಜವಳಿ ಮಂತ್ರಾಲಯದ ಸಮರ್ಥ ಇಲಾಖೆಯಿಂದ ಪ್ರಮಾಣ ಪತ್ರ ನೀಡಲಾಗಿದೆ. ತರಬೇತಿಯ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ನೇಹಾ ಮಿಸ್ಕಿನ ಸ್ವಾಗತಿಸಿದರು. ಜಯಶ್ರೀ ಪೋಳ ರವರು ನಿರೂಪಿಸಿದರು. ವಿನಾಯಕ ಹಬೀಬ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net