

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿನ ಬಹುತೇಕ ಅವೈಜ್ಞಾನಿಕ ಚರಂಡಿಗಳು ಅವ್ಯವಸ್ಥೆಗೆ ಮಾದರಿಯಾಗಿದ್ದು ನಾನಾ ಆವಾಂತರಗಳಿಗೆ ಕಾರಣವಾಗಿವೆ. ಅಲ್ಲಲ್ಲಿ ಏರು ತಗ್ಗು, ಸರಾಗವಾಗಿ ಹರಿಯದ ನೀರು, ವಾರ್ಡುಗಳಲ್ಲಿ ಪರಸ್ಪರ ಒಂದಕ್ಕೊಂದು ಲಿಂಕ್ ಇಲ್ಲದಿರುವಿಕೆ, ತುಂಬಿ ತುಳುಕಾಡುವ ತ್ಯಾಜ್ಯ. ಹೀಗೆ ನಾನಾ ಕಡೆ ಚರಂಡಿಗಳು ದುಸ್ಥಿತಿ ಇದೆ.
ಪ್ರಸ್ತುತ ಮುಂಗಾರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದೇ ವೇಳೆ ಚರಂಡಿಗಳ ಬದಲಿಗೆ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ದೊಡ್ಡ ದೊಡ್ಡ ಚರಂಡಿಗಳು ನಿಂತುಕೊಂಡಿರುವ ಕೊಳಚೆ ನೀರಿನಿಂದ ತುಂಬಿವೆ. ಇದರಿಂದ ಆಯಾ ವಾಡಿರ್ನ ಸದಸ್ಯರು ಯುದ್ಧ ಕಾಲೇ ಶಸಾಭ್ಯಾಸ ಎನ್ನುವಂತೆ ಮಳೆಗಾಲದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕಾಗಿದ್ದು ಸ್ಥಳಿಯರಿಂದ ನಿಂದನೆಗೊಳಬೇಕಾಗಿದೆ.
ಜಿಲ್ಲಾ ಕೇಂದ್ರವು 31 ವಾರ್ಡುಗಳನ್ನು ಹೊಂದಿದೆ. ಇಲ್ಲಿನ ಬಹುತೇಕ ವಾರ್ಡ್ಗಳಲ್ಲಿ ಚರಂಡಿಯನ್ನು ವೈಜ್ಞಾನಿಕವಾಗಿ ನಿಮಿರ್ಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಬಿಡುಗಡೆಯಾದ ಅನುದಾನಕ್ಕೆ ಅನುಗುಣವಾಗಿ ಅರ್ಧಂರ್ಬಧ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಚರಂಡಿಗಳಿಗೆ ಪರಸ್ಪರ ಸಂಪರ್ಕ ಇರುವುದಿಲ್ಲ. ಎರಡ್ಮೂರು ತುಂಡಾದ ಚೈನಿ ಮಾದರಿಯಲ್ಲಿ ಇರುತ್ತದೆ. ಹೀಗಿರುವಾಗ ಕೊಳಚೆ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲಿಯೇ ನಿಂತು ಬ್ಲಾಕ್ ಆಗಿ ರಸ್ತೆ ಮೇಲೆ ಹರಿಯುತ್ತಿದ್ದು, ಸ್ಥಳಿಯ ಜನರು ತೊಂದರೆ ಅನುಭವಿಸುವಂತಾಗಿದೆ. ಇದರ ಬಗ್ಗೆ ದರ್ಗಾ ಮೊಹಲ್ಲಾ, ಪ್ರಶಾಂತನಗರ, ಸರ್ ಎಂ.ವಿ.ಬಡಾವಣೆ, ಚಾಮರಾಜಪೇಟೆ, ವಾಪಸಂದ್ರದಲ್ಲಿ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.
ಚರಂಡಿಗೆ ಯುಜಿಡಿ ಸಂಪರ್ಕ: ಜಿಲ್ಲಾ ಕೇಂದ್ರ ಅಭಿವೃದ್ಧಿ ಹೊಂದುತ್ತಿರುವುದರ ನಡುವೆ ಹಲವು ವರ್ಷಗಳಿಂದ ಬಾಧಿಸುತ್ತಿರುವ ಯುಜಿಡಿ ಕಿರಿಕಿರಿ ಮಾತ್ರ ತಪ್ಪಿಲ್ಲ. ಪ್ರಶಾಂತನಗರ, ಜೈ ಭೀಮ್ ನಗರ, ಚಾಮರಾಜಪೇಟೆ, ಕಂದವಾರ ಸೇರಿ ನಗರದ ಬಹುತೇಕ ಕಡೆ ಯುಜಿಡಿ ಬ್ಲಾಕ್ ಆಗಿರುತ್ತದೆ. ದಿನಗಟ್ಟಲೇ ನೀರು ಹರಿದು ಹೋಗುತ್ತಿರುತ್ತದೆ. ಇದನ್ನು ಅನಿವಾರ್ಯವಾಗಿ ತುಳಿದುಕೊಂಡು ಹೋಗುವಂತಾಗಿದೆ. ಪದೇ ಪದೆ ಒಳಚರಂಡಿಯಲ್ಲಿ ನೀರು ನಿಲ್ಲುತ್ತಿದ್ದರೂ ಮಾತ್ರ ತಾತ್ಕಾಲಿಕ ಪರಿಹಾರ ಕೈಗೊಳ್ಳುತ್ತಿದ್ದು, ಆಗಾಗ ಸಕ್ಕಿಂಗ್ ಯಂತ್ರವನ್ನು ತಂದು ನೀರು ಖಾಲಿ ಮಾಡಲಾಗುತ್ತದೆ. ಆದರೆ, ಕೆಲವೇ ದಿನಗಳಲ್ಲಿ ಸಮಸ್ಯೆ ಪುನಃ ಕಂಡು ಬರುತ್ತದೆ. ಇದಕ್ಕೆ ಅಲ್ಲಲ್ಲಿ ಅವೈಜ್ಞಾನಿಕ ಒಳಚರಂಡಿಯ ನಿರ್ಮಾಣ, ಕಳಪೆ ಕಾಮಗಾರಿ, ಪೈಪು ಒಡೆದಿರುವುದು ಸೇರಿ ನಾನಾ ಕಾರಣಗಳು. ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಇದೀಗ ಜನರು ಸಮಸ್ಯೆ ಅನುಭವಿಸುವಂತಾಗಿದೆ.
ಮತ್ತೊಂದೆಡೆ ಕೋಟ್ಯಂತರ ಅನುದಾನವನ್ನು ನುಂಗಿರುವ ಯುಜಿಡಿಗೆ ವಾಡಿರ್ನಲ್ಲಿನ ಚರಂಡಿಗಳ ಸಂಪರ್ಕ ಕಲ್ಪಿಸಿರುವುದು ಅವೈಜ್ಞಾನಿಕತೆಗೆ ನಿಖರ ನಿದರ್ಶನ. ಮಲ ಮೂತ್ರ, ಶೌಚಗೃಹ ನೀರು ಚರಂಡಿಯ ನೀರಿನಲ್ಲಿ ಮಿಶ್ರಣಗೊಳ್ಳುತ್ತಿವೆ. ಮಳೆಯ ನೀರು ಮಿಶ್ರಣವಾಗಿ, ಮಳೆ ಕೊಯ್ಲು ಎಂಬುದಕ್ಕೆ ಅರ್ಥವಿಲ್ಲದಂತಾಗಿದೆ.
ನಗರಸಭೆ ಜನಪರ ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ಕಾಮಗಾರಿ ಗುತ್ತಿಗೆ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಚರಂಡಿಗಳು ಮತ್ತು ಒಳಚರಂಡಿ ವ್ಯವಸ್ಥೆ ಸರಿ ಇಲ್ಲ. ಯುಜಿಡಿ ನೀರು ಚರಂಡಿಗೆ ಹರಿಯುತ್ತಿದೆ. ಇದರಿಂದ ವ್ಯಾಪಕವಾಗಿ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗುತ್ತಿದೆ.
ವಿ.ನೇತ್ರಾವತಿ, ನಗರಸಭೆ ಸದಸ್ಯೆ, ಚಿಕ್ಕಬಳ್ಳಾಪುರ
ವಾಡಿರ್ನಲ್ಲಿ ಚರಂಡಿಗಳಿಗೆ ಸಂಪರ್ಕವಿಲ್ಲದಿರುವಾಗ ಸರಾಗವಾಗಿ ನೀರು ಹೇಗೆ ಹರಿಯುತ್ತದೆ. ಸರ್ಕಾರದ ಅನುದಾನದಲ್ಲಿ ಅವೈಜ್ಞಾನಿಕ ಚರಂಡಿಗಳನ್ನು ನಿರ್ಮಾಣವಾಗುತ್ತಿದೆ. ಇದನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾಮಗಾರಿ ಉದ್ಘಾಟನೆಗೆ ಮಾತ್ರ ಸೀಮಿತವಾಗಿ, ಪ್ರಚಾರ ಪಡೆಯುತ್ತಿದ್ದಾರೆ.
ವಿ.ರವಿಕುಮಾರ್, ಕನ್ನಡಸೇನೆ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ