ಚರಂಡಿ ಕಾಮಗಾರಿ ವೇಳೆ ಬನ್ನಿಕಟ್ಟೆ ಧ್ವಂಸ

220122 Mudgal Bannikatti Smash Issue
ಮುದಗಲ್‌ನಲ್ಲಿ ಚರಂಡಿ ನಿರ್ಮಾಣದ ವೇಳೆ ಬನ್ನಿಕಟ್ಟೆ ಧ್ವಂಸಗೊಳಿಸಿದ್ದಕ್ಕೆ ಪುರಸಭೆ ಇಂಜಿನಿಯರ್ ಮಹೇಂದ್ರರನ್ನು ಶನಿವಾರ ನಾಗರಿಕರು ತರಾಟೆಗೆ ತೆಗೆದುಕೊಂಡರು.
Published on

ಮುದಗಲ್: ಪಟ್ಟಣದ ಇಳಕಲ್-ಲಿಂಗಸುಗೂರು ಸಂಪರ್ಕ ರಸ್ತೆಯಲ್ಲಿ ಕೈಗೊಂಡಿರುವ ಚರಂಡಿ ಕಾಮಗಾರಿ ವೇಳೆ ಬನ್ನಿಕಟ್ಟೆ ಧ್ವಂಸಗೊಳಿಸಿರುವ ಹಿನ್ನೆಲೆಯಲ್ಲಿ ಪುರಸಭೆ ಇಂಜಿನಿಯರ್ ಮಹೇಂದ್ರರನ್ನು ಶನಿವಾರ ನಾಗರಿಕರು ತರಾಟೆಗೆ ತೆಗೆದುಕೊಂಡರು.

ರಸ್ತೆ ಪಕ್ಕದ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಆದರೆ ವಿಜಯ ದಶಮಿ ಸೇರಿ ನಿತ್ಯ ನೂರಾರು ಭಕ್ತರು ಪೂಜೆ ಮಾಡುವ ಬನ್ನಿ ಕಟ್ಟೆಯನ್ನು ತೆರವುಗೊಳಿಸಲಾಗಿದೆ. ಇದರ ಪಕ್ಕದಲ್ಲೇ ಕೆಲವರ ಕಟ್ಟಡಗಳಿದ್ದು ಅವುಗಳನ್ನು ತೆರವುಗೊಳಿಸದೆ ಚರಂಡಿಯನ್ನು ತಿರುವು ಮಾಡಿಕೊಂಡು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಕಾಮಗಾರಿ ನಿಲ್ಲಿಸಿ ಒಡೆದು ಹಾಕಿರುವ ಬನ್ನಿ ಕಟ್ಟೆಯನ್ನು ಮತ್ತೆ ನಿರ್ಮಿಸುವಂತೆ ನಾಗರಿಕರು ಪಟ್ಟು ಹಿಡಿದರು. ಇದರಿಂದ ಪೇಚಿಗೆ ಸಿಲುಕಿದ ಪುರಸಭೆ ಸಿಬ್ಬಂದಿ, ಚರಂಡಿ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಯನ್ನು ಜೆಸಿಬಿ ಮೂಲಕ ಪುನಃ ಮುಚ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net