

ಮುದಗಲ್: ಸ್ಥಳೀಯ ಪುರಸಭೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಚರಂಡಿ ಕುಸಿದಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ರಸ್ತೆ ಚರಂಡಿಗೆ ಬಿದ್ದ ಲಾರಿ
ಮುಖ್ಯ ರಸ್ತೆಯ ಮಾರ್ಗ ಮಧ್ಯೆದಲ್ಲಿಯೇ ಚರಂಡಿ ಕುಸಿದು ವರ್ಷಗಳೇ ಗತಿಸಿದರೂ ದುರಸ್ಥಿ ಮಾಡದೇ ಪುರಸಭೆ ನಿರ್ಲಕ್ಷ ವಹಿಸಿದೆ. ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಅವರ ಕಾರು ಕೂಡ ಈ ಚರಂಡಿಯಲ್ಲಿ ಸಿಲುಕಿದಾಗ ಪುರಸಭೆ ಮುಖ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು.
ಅದರೂ, ಪುರಸಭೆ ಅಧಿಕಾರಿಗಳು ರಿಪೇರಿಗೆ ಮುಂದಾಗಿಲ್ಲ. ಸೋಮವಾರ ರಾತ್ರಿ ಲಿಂಗಸುಗೂರಿನಿಂದ ಮಾಕಾಪೂರ, ಛತ್ತರ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಸವಾರರು ಚರಂಡಿಯಲ್ಲಿ ಮುಗಿಚಿ ಬಿದ್ದಿದ್ದರು. ಚಿಕಿತ್ಸೆಗಾಗಿ ಬಾಗಲಕೋಟೆ ಮತ್ತು ಶಹಾಪೂರದ ಕಾರುಗಳಲ್ಲಿ ಮಂಗಳವಾರ ಬಂದಿದ್ದ ರೋಗಿಗಳು ಚರಂಡಿಯಲ್ಲಿ ಕಾರು ಸಿಲುಕಿದ್ದರಿಂದ ತೊಂದರೆ ಅನುಭವಿಸಿದರು. ಈ ವೇಳೆ ಸ್ಥಳೀಯರ ಸಹಾಯದಿಂದ ಕಾರನ್ನು ಮೇಲೆಕ್ಕೆತ್ತಲಾಯಿತು.
ಸ್ಥಳೀಯ ನಿವಾಸಿಮೇಘಣ್ಣಮುಖ್ಯ ರಸ್ತೆಯಲ್ಲಿ ಚರಂಡಿ ಕುಸಿದ ಹಿನ್ನೆಲೆಯಲ್ಲಿ ಕಾರು ಸಿಲುಕಿ ಕಾರಿನ ಮುಂಭಾಗ ಹಾಳಾಗಿ ಯಂತ್ರಕ್ಕೆ ಧಕ್ಕೆಯಾಗಿದೆ. ಪುರಸಭೆ ಅಧಿಕಾರಿಗಳು ಕ್ರಮಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.