ಸೇವಾಲಾಲರು ಶ್ರೇಷ್ಠ ಪವಾಡ ಪುರುಷ

Sewalal is a great miracle worker.
ವಿಜಯಪುರದ ಕಸಾಪ ಸಭಾಂಗಣದಲ್ಲಿ ಸಂತ ಸೇವಾಲಾಲರ ಕುರಿತ ಚಿಂತನಾ ಗೋಷ್ಠಿಯನ್ನು ಶಾಸಕ ವಿಠಲ ಕಟಕದೋಂಡ ಉದ್ಘಾಟಿಸಿದರು. ಹಾಸಿಂಪೀರ ವಾಲಿಕಾರ, ಮಲ್ಲಿಕಾರ್ಜುನ ನಾಯಕ, ಡಾ. ಸುರೇಖಾ ರಾಠೋಡ ಮತ್ತಿತರರಿದ್ದಾರೆ.
Published on

ವಿಜಯಪುರ: ಸಂತ ಸೇವಾಲಾಲರು ಭರತ ಖಂಡದ ಧಾರ್ಮಿಕ ರಾಯಭಾರಿಗಳು. ಅಲ್ಲದೆ, ಶ್ರೇಷ್ಠ ಪವಾಡ ಪುರುಷರಾಗಿ ಸಮಾಜದ ಮೌಢ್ಯಗಳನ್ನು ಕಿತ್ತೊಗೆದು ಇಡೀ ಬಂಜಾರಾ ಸಮಾಜದ ದೈವಿ ಪುರುಷರಾಗಿ ಹೊರಹೊಮ್ಮಿದವರು ಎಂದು ನಾಗಠಾಣ ೇತ್ರದ ಶಾಸಕ ವಿಠಲ ಕಟಕಧೋಂಡ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಮತ್ತು ಕಸಾಪ ನಗರ ಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲರ ಕುರಿತ ಚಿಂತನಾ ಗೋಷ್ಠಿಯಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಸಲ್ಲಿಸಿ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸೇವಾಲಾಲರು ಜನರಲ್ಲಿನ ಅಂಧ@ಕಾರ ಹೋಗಲಾಡಿಸಿದ ಶ್ರೇಷ್ಠ ಮಹಾನ್​ ಪುರುಷರು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯಕ ಮಾತನಾಡಿ, ಇಲ್ಲಿನ ಕಸಾಪ ಜಿಲ್ಲಾ ಟಕ ಅತ್ಯಂತ ಕ್ರಿಯಾಶೀಲವಾಗಿ ಎಲ್ಲ ಮಹನೀಯರ ಜಯಂತಿಗಳನ್ನು ಆಚರಿಸುತ್ತಿರುವುದು ನಿಜಕ್ಕೂ ಶ್ಲಾನೀಯ. ಅಖಂಡ ಭಾರತ ದೇಶದಲ್ಲಿ ಬಂಜಾರಾ ಸಮುದಾಯದವರು ಇಡಿಯಾಗಿ ಬಂಜಾರಾ ಭಾಷೆಯನ್ನು ಬಳಸುವ ಮೂಲಕ ಒಂದೇ ಭಾಷೆಯನ್ನು ಅಖಂಡ ದೇಶದಾದ್ಯಂತ ಬಳಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಶಿಕ್ಷಕ, ಯುವ ಸಾಹಿತಿ ಯಮನಪ್ಪ ಪವಾರ ಸಂತ ಸೇವಾಲಾಲರ ಜೀವನ ಹಾಗೂ ಸಂದೇಶಗಳು ಕುರಿತು ಉಪನ್ಯಾಸದಲ್ಲಿ ಬಂಜಾರಾ ಸಮುದಾಯದ ಹಿನ್ನೆಲೆ ವಿವರಿಸಿ, ಓರ್ವ ಸಂತರು ಸೇವಾಲಾಲರು ನೊಂದವರಿಗೆ ಆತ್ಮಸ್ಥೈರ್ಯ ತುಂಬುವ, ಪುರುಷರಷ್ಟೇ ಸರಿ ಸಮಾನವಾದ ಸ್ಥಾನಮಾನ ಮಹಿಳೆಯರಿಗೂ ನೀಡಬೇಕು ಎಂದು ಪ್ರತಿಪಾದಿಸಿದ ಧೀಮಂತ ಪುರುಷರು ಎಂದು ತಿಳಿಸಿದರು.

ಜಿ.ಪಂ. ಮಾಜಿ ಸದಸ್ಯ ಎಂ.ಎಸ್​. ನಾಯಕ, ರಾಜಪಾಲ ಚವಾಣ, ರುಕ್ಮಿಣಿ, ಪಾಲಿಕೆ ಸದಸ್ಯೆ ಸುಮಿತ್ರಾ ಜಾಧವ, ದೇಶು ಚವ್ಹಾಣ, ಬಂಜಾರಾ ಅಕಾಡೆಮಿಯ ಸದಸ್ಯೆ ಡಾ. ಸುರೇಖಾ ರಾಠೋಡ ವೇದಿಕೆಯಲ್ಲಿದ್ದರು.

ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಸ್ವಾಗತಿಸಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶರಣಗೌಡ ಪಾಟೀಲ ವಂದಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ರಾಜೇಸಾಬ ಶಿವನಗುತ್ತಿ, ಅರ್ಜುನ ಶಿರೂರ, ಜಿ.ಎಸ್​. ಬಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಡಾ. ಎಂ.ಎಸ್​ ಮಾಗಣಗೇರಿ, ವಿಠಲ ಸಿಂಧೆ, ಸುಖದೇವಿ ಅಲಬಾಳಮಠ, ಬಿ.ವಿ. ಪಟ್ಟಣಶೆಟ್ಟಿ, ಶ್ರೀಕಾಂತ ಚಿಮ್ಮಲಗಿ, ಎಂ.ಡಿ. ಬಿಳಿಜಾಡರ, ಸದಾಶಿವ ಅಂಗಡಿ, ಮಂಜುಳಾ ಅಂಗಡಿ, ಕೆ.ಎಸ್​. ಹಣಮಾಣಿ, ರೂಪಾ ರಜಪೂತ, ಆನಂದ ಕುಂಟೋಜಿ, ಅರವಿಂದ ಪವಾರ, ಬಿ.ಎಸ್​. ಬಿರಾದಾರ, ವಿರೇಶ ಅಂಗಡಿ, ರಾಹುಲ ಚವ್ಹಾಣ, ಶಿವಾಜಿ ಮೋರೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net