ರಸ್ತೆಯಲ್ಲೇ ಹರಿಯುತ್ತಿರುವ ಚರಂಡಿ ನೀರು

FotoJet
Published on

ಸಾಂಕ್ರಾಮಿಕ ರೋಗದ ಭೀತಿ

ಪಾವಗಡ: ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿ ದೇವಲಕೆರೆ ಗ್ರಾಮದ ಎಸ್​.ಟಿ ಕಾಲನಿಯಲ್ಲಿ ಸುಮಾರು ವರ್ಷದಿಂದ ಸಿಸಿ ರಸ್ತೆ ದುರಸ್ತಿ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ ಬೀದಿಯಲ್ಲಿ ಚರಂಡಿ ನೀರು ಹರಿದು ರಸ್ತೆಯು ಗದ್ದೆಯಂತಾಗಿ ಮಾರ್ಪಟ್ಟು ಕೆಸರು ತುಂಬಿಕೊಂಡು ಕಾಲನಿಯ ಜನರಿಗೆ ಸಾಕ್ರಾಂಮಿಕ ರೋಗಗಳು ಹರಡುವ ಬೀತಿ ಸೃಷ್ಟಿಯಾಗಿದೆ.

ದೇವಲಕೆರೆ ಗ್ರಾಮದಲ್ಲಿ ಬಹುತೇಕ ಬೀದಿಗಳಿಗೆ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲವಾದ್ದರಿಂದ

ಕಾಲನಿಯ ರಸ್ತೆಯಲ್ಲೇ ಕೆಸರು ನೀರು ಹರಿದು ದುರ್ವಾಸನೆ ಬೀರುತ್ತಿದೆ. ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ರಸ್ತೆಯಲ್ಲಿಯೇ ನೀರು ನಿಂತು ದೊಡ್ಡ ಹೊಂಡಗಳಾಗಿ ನಿಮಾರ್ಣಗೊಂಡಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿವೆ.

ಮನೆಗಳ ಮುಂದೆ ಸಾಕಷ್ಟು ನೀರು ಸಂಗ್ರಹಗೊಂಡಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡೆತಡೆಯಾಗಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೊಳಚೆ ನೀರಿನಲ್ಲಿಯೇ ಮಕ್ಕಳು, ವಯೋವೃದ್ಧರು ತಿರುಗಾಡುತ್ತಿದ್ದಾರೆ. ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ವ್ಯರಿತಿಕ್ತ ಪರಿಣಾಮ ಬೀರುತ್ತಿದ್ದು. ಸಿಸಿ ಚರಂಡಿ ಹಾಗೂ ಸಿಸಿ ರಸ್ತೆ ನಿಮಾರ್ಣ ಮಾಡಬೇಕಿದೆ. ಅಲ್ಲದೆ ಕೊಳಚೆ ನೀರಿರುವ ಬಳಿ ಬ್ಲಾಚಿಂಗ್​ ಪೌಡರ್​ ಹಾಗೂ ಔಷಧ ಸಿಂಪಡಣೆಗೆ ಕೆ.ಟಿ ಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net