

ಚಿಕ್ಕಮಗಳೂರು: ನಗರದ ವಿಜಯಪುರ ರ‍್ಮುಗಂ ರಸ್ತೆ (ಕಾರ್ಯಪ್ಪ ಪಾರ್ಕ್ ರಸ್ತೆ) ಗುಂಡಿ ಗೊಟರುಗಳಿಂದ ಕೂಡಿದ್ದು, ವಾಹನಗಳು ಸಂಚರಿಸುವಾಗ ರಸ್ತೆಯ ಕೊಳಚೆ ನೀರು ಅಕ್ಕಪಕ್ಕದ ಮನೆ ಗಳಿಗೆ ರಾಚುತ್ತಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಸಂಬAಧಪಟ್ಟ ವರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಇಡೀ ಬಡಾವಣೆಯ ಜನ ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ.
ಕಳೆದ ಒಂದೂವರೆ ವರ್ಷದಿಂದ ಈ ರಸ್ತೆಯನ್ನು ಒಳಚರಂಡಿ ಕಲ್ಪಿಸುವ ನೆಪದಲ್ಲಿ ಸಂಪೂರ್ಣ ಹಾಳುಗೆಡವಲಾಗಿದೆ. ಈ ರಸ್ತೆ ಮಲ್ಲಂದೂರು ರಸ್ತೆ ಗೆ ಚೇತನ ನರ್ಸಿಂಗ್ ಹೋಂವರೆ ಗೆ ಸಂಪರ್ಕ ರಸ್ತೆಯಾಗಿದೆ. ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಪಾದಚಾರಿಗಳು ಜೀವ ಬಿಗಿಹಿಡಿದು ಓಡಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಈ ರಸ್ತೆಗಳಲ್ಲಿ ಹಲವರು ಚರಂಡಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದು, ಮನೆಗಳಿಗೆ ರಸ್ತೆಯಿಂದಲೇ ರ‍್ಯಾಂಪ್ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಗರಸಭೆ ಹಾಗೂ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಗೊತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವುದು ಏಕೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
೩೦ ಅಡಿ ಅಗಲದ ರಸ್ತೆಯನ್ನು ಹಲವು ಕಟ್ಟಡ ಮಾಲೀಕರು ಒತ್ತುವರಿ ಮಾಡಿರುವ ಕಾರಣ ಕೆಲವೆಡೆ ರಸ್ತೆ ೨೦ ಅಡಿಗೆ ಕುಸಿದಿದೆ. ಈ ಬಗ್ಗೆ ನಗರಸಭೆಗೆ ಗೊತ್ತಿದ್ದರೂ ಮೌನವಹಿಸಿರುವುದು ಆಶ್ಚರ್ಯಕರವಾಗಿದೆ.
ಈ ರಸ್ತೆಯ ಕಾರ್ಯಪ್ಪ ಪಾರ್ಕ್ ಸಮೀಪ ಸಾರ್ವಜನಿಕ ನೀರಿನನಲ್ಲಿ ಇರುವ ಕಡೆ ಕಸ ಹಾಕಬಾರದು ಎಂದು ನಗರಸಭೆ ಸೂಚನಾ ಫಲಕ ಅಳವಡಿಸಿದೆ. ಆದರೆ ಜನ ಇಲ್ಲಿಯೇ ಕಸವನ್ನು ತಂದು ಸುರಿಯುತ್ತಿರುವುದರಿಂದ ಸೊಳ್ಳೆ ಹಾಗೂ ಬೀದಿ ನಾಯಿಗಳ ಹಾವಳಿ ಜಾಸ್ತಿ ಯಾಗಿ ರೋಗ ರುಜಿನಗಳಿಗೆ ಕಾರಣ ವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಾರ್ಕ್ ಒಳಗೆ ಹಗಲು ರಾತ್ರಿ ಪುಂಡರ ಹಾವಳಿ ಸಹ ಹೆಚ್ಚಾಗಿದ್ದು ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡು ಪುಂಡರ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಲ್ಲಂದೂರು ರಸ್ತೆಯ ಚೇತನಾ ಮೆಡಿಕಲ್ಸ್ನಿಂದ ಕಾರ್ಯಪ್ಪ ಉದ್ಯಾನವನವರೆಗೆ ರಸ್ತೆಗೆ ಅಡಚಣೆ ಮಾಡಿಕೊಂಡು ೨ ಬದಿ ವಾಹನ ನಿಲುಗಡೆ ಮಾಡುತ್ತಿದ್ದು, ಇದರಿಂದ ಶಾಲಾ ವಾಹನಗಳು, ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಯಾಗುತ್ತಿದೆ ಎಂದು ದೂರಿದ್ದಾರೆ.
ಈ ರಸ್ತೆಯ ೨ ಬದಿಗಳಲ್ಲಿ ಹಲವರು ಬೇರೆ ಕಡೆಯಿಂದ ವಾಹನಗಳನ್ನು ತಂದು ನಿಲ್ಲಿಸಿ ಹೋಗುತ್ತಿದ್ದು, ವಾಹನ ಮಾಲೀಕರು ವಾರಗಟ್ಟಲೇ ಆ ಕಡೆ ಸುಳಿಯದಿರುವುದರಿಂದ ಅಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ. ಕೆಲವು ಮನೆ ಮಾಲೀಕರು ಚರಂಡಿ ಮುಚ್ಚಿ ಮನೆ ನಿರ್ಮಾಣ ಮಾಡಿಕೊಂಡಿರುವುದರಿAದ ಅವರು ಮನೆ ತೊಳೆದ ಕೊಳಚೆ ನೀರು ರಸ್ತೆ ಯಲ್ಲಿ ದಿನನಿತ್ಯ ಹರಿಯುತ್ತಿದೆ. ಈ ಬಗ್ಗೆ ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಸ್ಥಳೀಯರು ತಂದರು ಕ್ರಮ ಜರುಗಿಸದೇ ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಈ ರಸ್ತೆ ಡಾಂಬರೀಕರಣ ಕಾಣದೇ ಹಲವು ವರ್ಷಗಳು ಕಳೆದಿದ್ದು ಈ ಬಗ್ಗೆ ನಗರಸಭೆ ಆಯುಕ್ತರು ಹಾಗೂ ವಾರ್ಡ್ ಸದಸ್ಯ ಲಕ್ಷö್ಮಣ್ ಅವರ ಗಮನಕ್ಕೆ ತಂದಿದ್ದು, ಗುತ್ತಿಗೆದಾರರ ನಿರ್ಲಕ್ಷö್ಯ ದಿಂದಾಗಿ ಡಾಂಬರೀಕರಣ ಆಗಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಮೊದಲು ರಸ್ತೆ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಚಿಕ್ಕಮಗಳೂರು ನಗರದ ಹಲವು ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಮಳೆ ಹೆಚ್ಚಾಗಿರುವ ಕಾರಣದಿಂದ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತ ಬಳಿಕ ನಗರದ ಎಲ್ಲ ರಸ್ತೆಗಳ ಗುಂಡಿ ಮುಚ್ಚಲು ಮೊದಲ ಆಧ್ಯತೆ ನೀಡುತ್ತೇವೆ. ಈ ಬಗ್ಗೆ ನಗರಸಭೆಯ ಎಲ್ಲ ಸದಸ್ಯರೂ ಸಹ ಚರ್ಚೆ ಮಾಡಿz್ದೆÃವೆ. ಆಯಾ ವಾರ್ಡ್ವಾರು ನಗರಸಭೆ ಸದಸ್ಯರ ಮಾಹಿತಿ ಮೇರೆಗೆ ಶೀಘ್ರವೇ ಗುಂಡಿ ಮುಚ್ಚಲು ಕ್ರಮಕೈಗೊಳ್ಳುತ್ತೇವೆ.
ಸುಜಾತಾ ಶಿವಕುಮಾರ್, ನಗರಸಭೆ ಅಧ್ಯಕ್ಷೆ ಚಿಕ್ಕಮಗಳೂರು