ರೈತರ ಆದಾಯ ವೃದ್ಧಿಗೆ ಹಲವಾರು ಯೋಜನೆ

Several schemes to increase farmers' income
ಲೋಕಾಪುರದ ರೈತ ಸಂಪರ್ಕ ಕೇಂದ್ರದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ರೈತರಿಗೆ ಸಬ್ಸಿಡಿ ದರದಲ್ಲಿ ತಾಡಪಾಲ ವಿತರಿಸಿದರು. ಅಶೋಕ ಕಿವಡಿ, ಶಿವಾನಂದ ಉದಪುಡಿ, ರಫೀಕ್ ಭೈರಕದಾರ, ಆನಂದ ಹಿರೇಮಠ, ತಹಸೀಲ್ದಾರ್ ವಿನೋದ ಹತ್ತಳ್ಳಿ ಇದ್ದರು.
Published on

ಲೋಕಾಪುರ : ರೈತರಿಗೆ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ.

ಸಿದ್ದರಾಮಯ್ಯ ಸರ್ಕಾರ ರೈತರ ಆದಾಯ ಹೆಚ್ಚಿಸಲು ಅನೇಕ ಸೌಲಭ್ಯಗಳನ್ನು ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ತಾಡಪಾಲ ವಿತರಿಸಿ ಅವರು ಮಾತನಾಡಿದರು.

ಧಾನ್ಯಗಳ ಸಂರಕ್ಷಣೆಗಾಗಿ ಸಬ್ಸಿಡಿ ದರದಲ್ಲಿ ತಾಡಪಾಲ ವಿತರಿಸಲಾಗುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ರೈತರು ಹಾಗೂ ಮಹಿಳೆಯರ ಆರ್ಥಿಕ ಬದುಕಿಗೆ ಸಹಾಯ ಹಸ್ತ ನೀಡುತ್ತಿದೆ ಎಂದರು.

ಪಪಂ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೆಲ ದಿನಗಳಲ್ಲೇ ಪಟ್ಟಣ ಪಂಚಾಯಿತಿ ಚುನಾವಣೆಗಾಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.

ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಉದಯಸಿಂಗ್ ಪಡತಾರೆ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಪಿಕೆಪಿಎಸ್ ಅಧ್ಯಕ್ಷ ಆನಂದ ಹಿರೇಮಠ, ತಾಪಂ ಮಾಜಿ ಸದಸ್ಯ ರಫೀಕ್ ಭೈರಕದಾರ, ಎಂ.ಎಂ. ಹುಂಡೇಕಾರ, ಕೃಷ್ಣಾ ಹೂಗಾರ, ಹೊಳಬಸು ದಂಡಿನ, ಮಲ್ಲನಗೌಡ ಪಾಟೀಲ, ರೆಹಮಾನ್ ತೊರಗಲ್, ಶಿವಯೋಗಿ ಗಂಗಣ್ಣವರ, ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಇಒ ಸಂಜು ಹಿಪ್ಪರಗಿ, ಸಹಾಯಕ ಕೃಷಿ ನಿರ್ದೇಶಕ ಬಿ.ಜಿ. ಮಾಳೇದ, ಕೃಷಿ ಅಧಿಕಾರಿಗಳಾದ ಎಸ್.ಎಸ್. ತಟ್ಟಿಮನಿ, ಲಕ್ಷ್ಮೀ ತೇಲಿ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net