ಟೆಂಪೋ, ಬಸ್ ನಡುವೆ ಡಿಕ್ಕಿ ಹಲವರಿಗೆ ಗಾಯ

2mnd2 - ACCIDENT
Published on

ಮುಂಡಗೋಡ: ಬಸ್ ಹಾಗೂ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಹಲವರು ಗಾಯಗೊಂಡ ಘಟನೆ ತಾಲೂಕಿನ ಮೈನಳ್ಳಿ ಗ್ರಾಮದ ಬಳಿ ಭಾನುವಾರ ನಡೆದಿದೆ.

ಯಲ್ಲಾಪುರ ತಾಲೂಕಿನ ಬಿರಗದ್ದೆ ಗ್ರಾಮದ ಶಶಾಂಕ ಕೃಷ್ಣಾ ಗೌಡ, ನಾಗವೇಣಿ ಗೋಪಾಲ ಗೌಡ, ಕೃಷ್ಣಾ ಲಿಂಗಗೌಡ, ಜಯ]ೕ ಕೃಷ್ಣಾ ಗೌಡ ಗೌರಿ ಸುಬ್ಬಣ್ಣ ಗೌಡ ಹಾಗೂ ಉಮ್ಮಚಗಿ, ಮಹಾಲಕ್ಷ್ಮೀ ತಮ್ಮಣ್ಣ ಗೌಡ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮುಂಡಗೋಡ ಸರ್ಕಾರಿ ಆಸ್ಪತ್ರೆ ಹಾಗೂ ಯಲ್ಲಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕಿನ ಗುಂಜಾವತಿ ಗ್ರಾಮದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಯಲ್ಲಾಪುರದಿಂದ ಟೆಂಪೋದಲ್ಲಿ ಬರುತ್ತಿರುವಾಗ ಮೈನಳ್ಳಿ ಸನಿಹ ಮುಂಡಗೋಡದಿಂದ ಯಲ್ಲಾಪುರ ಕಡೆಗೆ ಹೋಗುತ್ತಿದ್ದ ಬಸ್​ಗೆ ಡಿಕ್ಕಿಯಾಗಿದೆ. ಈ ಮಾರ್ಗವಾಗಿ ಬರುತ್ತಿದ್ದ ಶಾಸಕ ಶಿವರಾಮ ಹೆಬ್ಬಾರ ಅವರು ಅಪಘಾತವಾದ ಸ್ಥಳದಲ್ಲಿದ್ದು, ಗಾಯಾಳುಗಳನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ಕಳಿಸಿದರೆ, ಇನ್ನು ಕೆಲವರನ್ನು ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಕಳುಹಿಸಿದ್ದಾರೆ.

ಮುಂಡಗೋಡ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಸಂಭ್ರಮದಿಂದ ನಡೆಯುತ್ತಿದ್ದ ಮದುವೆ ಮನೆಯಲ್ಲಿ ಅಪಘಾತದ ಸುದ್ದಿ ತಿಳಿದು ನೀರವ ಮೌನ ಆವರಿಸಿತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net