ಮಟ್ಕಾದಲ್ಲಿ ತೊಡಗಿದ್ದವರ ಹಲವರ ಬಂಧನ

matka
Published on

ಬೆಳಗಾವಿ: ನಗರದಲ್ಲಿ ನಡೆದ ಮೂರು ಪ್ರತ್ಯೇಕ ದಾಳಿಯಲ್ಲಿ ವಿವಿಧೆಡೆ ಮಟ್ಕಾ ಆಟದಲ್ಲಿ ತೊಡಗಿದ್ದ ಹಲವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಕ್ಯಾಂಪ್​ ಪ್ರದೇಶ ವ್ಯಾಪ್ತಿಯ ಹಾಜಾಪೀರ ರಸ್ತೆಯಲ್ಲಿ ಮಟ್ಕಾ ವ್ಯವಹಾರದಲ್ಲಿ ತೊಡಗಿದ್ದ ತೆಲಗು ಕಾಲನಿ ನಿವಾಸಿ ಪ್ರಸನ್ನ ಉಪ್ಪಾರ( 46)ನನ್ನು ಶುಕ್ರವಾರ ಕ್ಯಾಂಪ್​ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ನಗರದ ಕಲ್ಯಾನಟ್ಟಿ&ರಂಗದೋಳಿ ರಸ್ತೆಯ ಪಕ್ಕದಲ್ಲಿ ಮಟ್ಕಾ ಆಟದಲ್ಲಿ ನಿರತರಾಗಿದ್ದ ತಾಲೂಕಿನ ತೀರ್ಥಕುಂಡೆ ನಿವಾಸಿ ಶ್ಯಾಮ ಮುತ್ಯಾನಟ್ಟಿ , ಬಾಮನವಾಡಿಯ ಕಿರಣ ಕೆಂಗಣ್ಣವರ, ಸಂತ್ತಿಬಸ್ತವಾಡದ ಪರಶುರಾಮ ದೇಸೂರಕರ, ನಾಮದೇಶ ಕಿಲ್ಲೆಕರ,ನಾಗಪ್ಪ ಬಡ್ರಿ, ವಾವಾಡಿಯ ರಾಜು ಶಿಂಧೆ ಗ್ರಾಮೀಣ ಠಾಣೆ ಪೊಲೀಸ್​ರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಳೇಬಾವಿ ಗ್ರಾಮದ ದುರ್ಗಾ ಮಂದಿರ ಬಳಿ ಮಟ್ಕಾ ಬರೆದುಕೊಳ್ಳುವ ವ್ಯವಹಾರದಲ್ಲಿ ತೊಡಗಿದ್ದ ಅಡ್ಡೆ ಮೇಲೆ ಮಾರಿಹಾಳ ಠಾಣೆ ಪೊಲೀಸರು ದಾಳಿ ನಡೆಸಿ ಸುಳೇಬಾವಿ ನಿವಾಸಿ ಅರ್ಜುನ ಗಡಗಿ(23), ರಾಜು ಗಡಗಿ ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ನಗದು ಹಾಗೂ ಮಟ್ಕಾಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net