ಇಸ್ಪೀಟ್ ಆಡುತ್ತಿದ್ದ ಏಳು ಜನರ ಬಂಧನ

Ispeet
Published on

ಭಟ್ಕಳ: ಮುರ್ಡೆಶ್ವರ ಬೆಂಗ್ರೆ ಪೆಟ್ರೋಲ್ ಬಂಕ್ ಸಮೀಪ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ಜಿಲ್ಲಾ ಸಿಇಎನ್ ಅಪರಾಧ ಪತ್ತೆ ವಿಭಾಗದ ಡಿವೈಎಸ್​ಪಿ ಅಶ್ವಿನಿ ನೇತೃತ್ವದ ಪೊಲೀಸರ ತಂಡ 7 ಜನರನ್ನು ಬಂಧಿಸಿದೆ.

ಕೈಕಿಣಿ ಬಸ್ತಿಯ ನಾರಾಯಣ ಮಟ್ಟಾ ನಾಯ್ಕ, ಮಾವಳ್ಳಿಯ, ಸುಬ್ರಹ್ಮಣ್ಯ ಜಯಾ ನಾಯ್ಕ, ಮುಂಡಳ್ಳಿಯ ವಿನೋದ ಸುಬ್ರಾಯ ದೇವಾಡಿಗ, ಸಂದೇಶ ಸುಬ್ರಾಯ ದೇವಡಿಗ, ಶಿರಾಲಿ ಗುಮ್ಮನಹಕ್ಲು ಹರೀಶ ನಾಗಪ್ಪ ಆಚಾರಿ, ತೆರ್ನಮಕ್ಕಿ ಜನತಾ ಕಾಲನಿಯ ಮೋಹನ ತಿಮ್ಮಯ್ಯ ನಾಯ್ಕ, ಮುರ್ಡೆಶ್ವರದ ಜಯಂತ ನಾರಾಯಣ ನಾಯ್ಕ ಬಂಧಿತರು. ಬಂಧಿತರಿಂದ 25,390 ರೂಪಾಯಿ, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುರ್ಡೆಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net