

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ನಾಡಕಚೇರಿಯ ಉಪತಹಸೀಲ್ದಾರ್ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಹು-ಧಾ ಪೂರ್ವ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿ ವಂಚಿಸಿದ್ದಾರೆ ಎಂಬ ಆರೋಪದಡಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಫ್ರೀನ್ ಬಿ., ಮುಸ್ಕಾನ್ ಆರ್., ಜಾಸ್ಮೀನ್ ಸಿ., ಶೇಯಾದ್, ಬುಡಾವನಬಿ, ಯಾಸೀನಖಾನ್ ಹಾಗೂ ಸಹಾಯ ಮಾಡಿದ ಮುಸ್ತಾನಲಿ ಎಂಬುವರ ವಿರುದ್ಧ ಉಪತಹಸೀಲ್ದಾರ್ ರವೀಂದ್ರ ಗುಗ್ಗರಿ ದೂರು ದಾಖಲಿಸಿದ್ದಾರೆ. ಕಸಾಬಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.