ಕ್ವಿಜ್,ವಲಯಮಟ್ಟಕ್ಕೆ ದುರ್ಗ ತಾಲೂಕಿನಿಂದ ಏಳು ವಿದ್ಯಾರ್ಥಿಗಳು

ctdd90000000000000000000000000000000
Published on

ಚಿತ್ರದುರ್ಗ:ಶಿಕ್ಷಣ ಇಲಾಖೆಯ ಐಟಿ ಕ್ವಿಜ್-2022 ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಬೆಂಗಳೂರು ವಲಯಮಟ್ಟಕ್ಕೆ ಆಯ್ಕೆಯಾಗಿರುವ ಚಿತ್ರದುರ್ಗ ತಾಲೂಕಿನ ಪ್ರೌಢಶಾಲೆಗಳ ಏಳು ವಿದ್ಯಾರ್ಥಿಗಳಿಗೆ ಶುಕ್ರವಾರ ಬಿಇಒ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ ಪ್ರಮಾಣ ಪತ್ರ ವಿತರಿ ಸಿದರು.

ಸೆ.2ರಂದು ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಪರ್ಧೆ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿತ್ತು. ಜಿ.ಆರ್.ಹಳ್ಳಿಯ ಪ್ರೌಢಶಾಲೆ ಆರ್.ಎಸ್.ಯಶ್ವಂತ್,ಜಿ.ಕೆ.ಭಾಸ್ಕರ್,ನಗರದ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯ ಎಂ. ಎಸ್.ಪಂಚಮಿ,ಶ್ರೀ ವಾಸವಿ ವಿದ್ಯಾ ಸಂಸ್ಥೆ ಸದೀದ್ ಖಾನ್ ಮತ್ತು ಮೌನೇಶಚಾರಿ,ಗಾರ್ಡಿಯನ್ ಏಂಜಲ್ ಶಾಲೆಯ ರಿದಾ ಫಾತಿಮಾ ಮತ್ತು ವಿ.ಶುಭಾಶ್ರೀ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕಗಳೊಂದಿಗೆ ಸೆ.28ರಂದು ನಡೆಯುವ ಬೆಂಗಳೂರು ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಬಿಆರ್‌ಸಿ ಸಂಪತ್ ಕುಮಾರ್,ಕ್ವಿಜ್ ನೋಡಲ್ ಅಧಿಕಾರಿ ಇಸಿಒ ಇನಾಯತ್ ಇತರರು ಇದ್ದರು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net