ಏಳು ರೈತರಿಗೆ ಜಮೀನು ಮಂಜೂರು: ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆ

hsd MLA beti 30 p1
Published on

ಹೊಸದುರ್ಗ: ತಾಲೂಕಿನ ಆಲದಹಳ್ಳಿ ಗ್ರಾಮದ ವೀರಾಪುರ ಸರ್ವೇ ನಂ 6 ರಲ್ಲಿ ಸಾಗುವಳಿ ಮಾಡುತ್ತಿದ್ದ ಏಳು ಮಂದಿ ರೈತರಿಗೆ ಜಮೀನು ಮಂಜೂರು ಮಾಡಲಾಗಿದೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

ತಾಲೂಕಿನ ಆಲದಹಳ್ಳಿ ಗ್ರಾಮಕ್ಕೆ ಗುರುವಾರ ಕಂದಾಯ ಇಲಾಖೆ, ಸರ್ವೇ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದರು.

ವೀರಾಪುರ ಸರ್ವೇ ನಂ 6 ರಲ್ಲಿರುವ ಸರ್ಕಾರಿ ಜಮೀನನ್ನು ಸಾಗುವಳಿಗೆ ಮಂಜೂರು ಮಾಡದಂತೆ 2020ರಲ್ಲಿ ರಾಜ್ಯ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ ಎಂದರು.

20 ವರ್ಷಗಳಿಂದ ಉಳುಮೆ ಮಾಡುತ್ತಿರುವುದು ಹಾಗೂ ತೆಂಗಿನ ತೋಟ ಇರುವುದರಿಂದ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುವಂತೆ ಏಳು ಮಂದಿಗೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಲಾಗಿದೆ ಎಂದು ಹೇಳಿದರು.

ಪೊಲೀಸ್ ನಿರೀಕ್ಷಕ ಎಂ.ಡಿ. ಫೈಜುಲ್ಲಾ, ಕಂದಾಯ ನಿರೀಕ್ಷಕ ಬಸವರಾಜು, ಸರ್ವೇ ಅಧಿಕಾರಿ ಕರಿಯಪ್ಪ, ಮಂಜುನಾಥ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net