

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಘರಾಣೆಯ ಸಂಸ್ಥಾಪಕ ಸಿತಾರ್ ರತ್ನ ರಹಿಮತ್ ಖಾನ್‌ರ 70ನೇ ಪುಣ್ಯತಿಥಿ ಅಂಗವಾಗಿ ನಗರದ ಡಾ. ಅಣ್ಣಾಜಿರಾವ್ ಸಿರೂರ ಸೃಜನಾ ರಂಗಮAದಿರದಲ್ಲಿ ಡಿ. 1ರಿಂದ 7ರವರೆಗೆ ಸಂಜೆ 5.30ರಿಂದ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ.
ಡಿ. 1ರಂದು ಸಂಜೆ 5.30ಕ್ಕೆ ನವದೆಹಲಿಯ ಅಭಯ ಸೊಪೋರಿ ಅವರ ಸಂತೂರ ವಾದನದ ನಿನಾದದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ಪದ್ಮಶ್ರೀ ಪುರಸ್ಕೃತ ಗಾನಪಂಡಿತ ಡಾ. ಎಂ. ವೆಂಕಟೇಶಕುಮಾರ ಗಾಯನ ಪ್ರಸ್ತುತಪಡಿಸುವರು. 2ರಂದು ಬೆಂಗಳೂರಿನ ಗೋಪಾಲಕೃಷ್ಣ ಬಿ.ಎಂ. ಅವರ ಸಿತಾರವಾದನ ಝೇಂಕಾರ ಮೊಳಗಲಿದೆ. ನಂತರ ಜೈಪುರ- ಅತ್ರೌಲಿ ಘರಾಣೆಯ ವಿದುಷಿ ಮುಂಬೈನ ಅಶ್ವಿನಿ ಭಿಡೆ ಅವರಿಂದ ಗಾಯನ, 3ರಂದು ಧಾರವಾಡದ ಶ್ರುತಿ ಅರ್ಚಕ ಹಾಗೂ ನೂರಜಹಾನ್ ನದಾಫ್ ಅವರ ಸಿತಾರ್ ಜುಗಲಬಂದಿ ಹಾಗೂ ಕಿರಾನಾ ಘರಾಣೆಯ ಪಂ. ಜಯತೀರ್ಥ ಮೇವುಂಡಿ ಅವರ ವಿದ್ವತ್‌ಪೂರ್ಣ ಗಾಯನ ಮೂಡಿಬರಲಿದೆ. 4ರಂದು ಮುಂಬೈನ ಯುವ ಕಲಾವಿದ ಎಸ್. ಆಕಾಶ ಅವರಿಂದ ಬಾನ್ಸುರಿ ವಾದನ, ಬೆಂಗಳೂರಿನ ಪಂ. ಪರಮೇಶ್ವರ ಹೆಗಡೆ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. 5ರಂದು ಪುಣೆಯ ಪಂ. ಅತುಲಕುಮಾರ ಉಪಾಧ್ಯೆ ಅವರಿಂದ ವಯೋಲಿನ್ ವಾದನ ಹಾಗೂ ಬೆಂಗಳೂರಿನ ಕೌಶಿಕ ಐತಾಳ- ಓಂಕಾರ ಹವಾಲ್ದಾರ ಅವರ ಗಾಯನ ಜುಗಲ್‌ಬಂದಿ ಹರಿದುಬರಲಿದೆ.
6ರಂದು ಸಂಜೆ 5.30ಕ್ಕೆ ಚೆನ್ನೆÊನ ಕೊಳಲು ವಿದ್ವಾನ್ ಶಶಾಂಕ ಸುಬ್ರಹ್ಮಣ್ಯಂ ಅವರು ಕರ್ನಾಟಕಿ ಸಂಗೀತ ಶೈಲಿಯ ವೇಣುವಾದನ ಪ್ರಸ್ತುತಪಡಿಸುವರು. ನಂತರ ಪುಣೆಯ ಅಮೋಲ್ ನಿಶಾಲ್ ಅವರ ಗಾನಸುಧೆ ಮೂಡಿಬರಲಿದೆ. 7ರಂದು ರಿತೇಶ ಹಾಗೂ ರಜನೀಶ ಮಿಶ್ರಾ ಸಹೋದರರಿಂದ ಗಾಯನದ ಜುಗಲಬಂದಿ ಪ್ರಸ್ತುತಗೊಳ್ಳಲಿದೆ. ಧಾರವಾಡ ಘರಾಣೆಯ ಉಸ್ತಾದ್ ಉಸ್ಮಾನ್ ಖಾನ್ ಹಾಗೂ ಉಸ್ತಾದ್ ಛೋಟೆ ರೆಹಮತ್‌ಖಾನ್ ಅವರ ದ್ವಂದ್ವ ಸಿತಾರವಾದನದ ಝೇಂಕಾರದೊ0ದಿಗೆ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ.