

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಘರಾಣೆಯ ಸ್ಥಾಪಕ ಸಿತಾರ ರತ್ನ ರಹಿಮತ್ ಖಾನ್‌ರ 70ನೇ ಪುಣ್ಯತಿಥಿ ಸಂಗೀತೋತ್ಸವವು ಶನಿವಾರ ತೆರೆ ಕಂಡಿತು. ನಗರದ ಸೃಜನಾ ರಂಗಮAದಿರದಲ್ಲಿ ಸಿತಾರ ರತ್ನ ಸಮಿತಿಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಸಪ್ತದಿನಗಳ ಸಂಗೀತ ಮಹೋತ್ಸವವು ರಸಿಕಶ್ರೋತೃಗಳನ್ನು ನಾದಲೋಕದಲ್ಲಿ ತೇಲಿಸಿತು.
ಅನೇಕ ಯುವ ಕಲಾವಿದರಿಗೆ ವೇದಿಕೆ ಒದಗಿಸಿದ್ದು ಹಾಗೂ ಧಾರವಾಡ ಘರಾಣೆಯ ಎಲ್ಲ ಹಿರಿಯ ಸಿತಾರ ಮಾ0ತ್ರಿಕರನ್ನು ಸ್ಮರಿಸಿಕೊಂಡಿದ್ದು ಸಂಗೀತೋತ್ಸವದ ವಿಶೇಷವಾಗಿತ್ತು. ಸಂಗೀತ ಸಮ್ಮೇಳನದ ಕೊನೆಯ ದಿನವಾದ ಶನಿವಾರದ ಕಾರ್ಯಕ್ರಮ ಧಾರವಾಡ ಘರಾಣೆಯ ಪಂ. ಸತೀಶಕುಮಾರ ಅವರಿಗೆ ಸಮರ್ಪಿತವಾಗಿತ್ತು.
ಆರಂಭದಲ್ಲಿ ನವದೆಹಲಿಯ ಯುವ ಗಾನಪ್ರತಿಭೆಗಳಾದ ರಿತೇಶ ಮಿಶ್ರಾ ಹಾಗೂ ರಜನೀಶ ಮಿಶ್ರಾ ಸಹೋದರರು ಶ್ರೀ ರಾಗವನ್ನು ಪ್ರಬುದ್ಧವಾಗಿ ಸಾದರಪಡಿಸಿದರು. ಮಧ್ಯಲಯ ಝಪತಾಲದಲ್ಲಿ `ಪ್ರಭು ಕೆ ಚರಣ...', ಧೃತ್ ಏಕತಾಲದಲ್ಲಿ `ಅಬ್ ಮೋರಿ ಪಾಹಿ....', ತೀನತಾಲದಲ್ಲಿ `ಮಾನಿನಿಯಾ ಕುಂದಲಾಮೊ..' ಅಲ್ಲದೆ, `ನೈನನ ಮೇ ಅಬ್ ಆನ ಬಸೋ..' ಅರ್ಥಪೂರ್ಣ ಬಂದಿಶ್‌ಗಳನ್ನು ಪ್ರಸ್ತುತಪಡಿಸಿದರು.
ಬನಾರಸ ಘರಾಣೆಯ ಗುಣವಿಶೇಷಣಗಳಿಂದ ತುಂಬಿ, ತಂದೆ ಕಾಕಾ ಪಂ. ರಾಜನ್‌ಸಾಜನ್ ಮಿಶ್ರಾ ಅವರ ಗಾಯನವನ್ನು ನೆನಪಿಸಿದರು. ನಂತರ ವೈವಿಧ್ಯಮಯ ರಾಗಗಳಿಂದ ಶೃಂಗರಿತಗೊ0ಡ ರಚನೆಯ ಪ್ರಸ್ತುತಿ ಮನಮೋಹಕವಾಗಿತ್ತು.