ಏಳು ಆಕಳು ಬೆಂಕಿಗಾಹುತಿ

Cows Died in fire Accident.
Published on

ಮುಂಡಗೋಡ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಏಳು ಆಕಳುಗಳು ಸಜೀವ ದಹನವಾದ ಘಟನೆ ಪಟ್ಟಣದ ಹಳೂರ ಓಣಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಹಳೂರಓಣಿಯ ಮಂಜುನಾಥ ನಾಗೇಶ ಶೇಟ್ ಎಂಬುವವರ ಆಕಳುಗಳು ಸಜೀವ ದಹನವಾಗಿವೆ.

ಮನೆಯ ಪಕ್ಕದಲ್ಲಿ ದನದಕೊಟ್ಟಿಗೆ ಮನೆಯಿದ್ದು ಇದರಲ್ಲಿ ಏಳು ಆಕಳುಗಳನ್ನು ಕಟ್ಟಲಾಗುತ್ತಿತ್ತು. ವಾಸದ ಮನೆಯಿಂದ ದನದ ಕೊಟ್ಟಿಗೆಗೆ ವಿದ್ಯುತ್ ಸಂಪರ್ಕ ಪಡೆದು ಒಂದು ಬಲ್ಪನ್ನು ಹಾಕಲಾಗಿತ್ತು ಆದರೆ ಕೊಟ್ಟಿಗೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಬೆಂಕಿಯ ಕಿಡಿಗಳು ಕೆಳಗಡೆ ಒಣಹುಲ್ಲಿನ ಮೇಲೆ ಬಿದ್ದು ಬೆಂಕಿ ಆವರಿಸಿಕೊಂಡಿದೆ.

ಕಟ್ಟಿಗೆಯಿಂದ ಮಾಡಿದ್ದ ಕೊಟ್ಟಿಗೆ ಮನೆಗೆ ವ್ಯಾಪಕವಾಗಿ ಬೆಂಕಿ ಆವರಿಸಿ ಏಳುಆಕಳುಗಳು ಸಜೀವ ದಹನವಾಗಿವೆ. ನಸುಕಿನ ಜಾವ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಶಾಸಕ ಶಿವರಾಮ ಹೆಬ್ಬಾರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net