ಪೂಜಾ ಕಾರ್ಯಗಳ ಮೌಲ್ಯತೆ ಕಾಪಾಡಿಕೊಳ್ಳಿ

vv clk japandndha
Published on

ಚಳ್ಳಕೆರೆ: ಸನಾತನ ಧರ್ಮ ಸಂಸ್ಕೃತಿ ಪರಂಪರೆ ಉಳಿವಿಗಾಗಿ ನಡೆದಿರುವ ಪೂಜಾ ಕಾರ್ಯಗಳ ಮೌಲ್ಯತೆ ಕಾಪಾಡಿಕೊಳ್ಳಬೇಕು ಎಂದು ಶ್ರೀ ರಾಮಕೃಷ್ಣ ಸೇವಾಶ್ರಮದ ಜಪಾನಂದ ಮಹಾರಾಜ್ ಸ್ವಾಮೀಜಿ ಹೇಳಿದರು.

ನಗರದ ವಾಸವಿ ಮಹಲ್‌ನಲ್ಲಿ ಸೋಮವಾರ ವಾಸವಿ ಯುವಜನ ಸಂಘ ಹಾಗೂ ಆರ್ಯ ವೈಶ್ಯ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿರುವ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಗೋಪೂಜೆ ನೆರವೇರಿಸಿ, ದೇವಿಯ ನಾಮ ಸಂಕೀರ್ತನೆಯೊಂದಿಗೆ ವಿಶೇಷ ಉಪನ್ಯಾಸ ನೀಡಿದರು.

ಗೋಮಾತೆಯನ್ನು ಪೂಜಿಸುವುದರಿಂದ ದೇವಾನುದೇವತೆಗಳ ಅನುಗ್ರಹವಾಗುತ್ತದೆ. ಗೋಸಂರಕ್ಷಣೆಯಿಂದ ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಬೇಕಿದೆ.

ಭೂಮಿಯ ಹಿತ ಅನುಗ್ರಹಕ್ಕೆ ಸದಾ ಕಾಪಾಡುವ ದೇವಿಯ ಶ್ರೀರಕ್ಷೆ ಜಗತ್ತಿಗೆ ಸಿಗಲು ನವರಾತ್ರಿಯ ಪೂಜಾ ಕಾರ್ಯಕ್ರಮಗಳಲ್ಲಿ ದೇವಿಯ ಮಹಿಮೆ ಕಾಣಬೇಕಿದೆ ಎಮದು ತಿಳಿಸಿದರು.

ಪೂಜಾ ಕಾರ್ಯಕ್ರಮದಲ್ಲಿ 800ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ರಾಮಕೃಷ್ಣ ಸೇವಾಶ್ರಮದ ಮಹಿಳಾ ಭಜನಾ ಮಂಡಳಿ ಸದಸ್ಯರು, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಬಿ. ಕೃಷ್ಣಮೂರ್ತಿ, ವಾಸವಿ ಯುವಜನ ಸಂಘದ ಅಧ್ಯಕ್ಷ ಆರ್.ಚೇತನ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net