ಕುಕ್ಕೆಯಲ್ಲಿ ಪ್ರಧಾನ ಸೇವೆ ಆರಂಭ

Kukke Seve
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುರುವಾರದಿಂದ ನಾಗದೋಷ ನಿವಾರಕ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಪಂಚಾಮೃತ ಮಹಾಭಿಷೇಕ ಪ್ರಾರಂಭಗೊಂಡಿತು.

99 ದಿನಗಳ ಬಳಿಕ ಸರ್ಕಾರದ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ದೇವಳದಲ್ಲಿ ಭಕ್ತರು ಪ್ರಧಾನ ಸೇವೆಗಳನ್ನು ನೆರವೇರಿಸಿದರು.

14 ಭಕ್ತರು ಸರ್ಪಸಂಸ್ಕಾರ ಸೇವೆ, 200 ಭಕ್ತರು ಆಶ್ಲೇಷ ಬಲಿ, 25 ನಾಗಪ್ರತಿಷ್ಠೆ ಮತ್ತು 3 ಭಕ್ತರು ಪಂಚಾಮೃತ ಮಹಾಭಿಷೇಕ ಸೇವೆ ಸಲ್ಲಿಸಿದರು.

ಸೇವಾಕರ್ತೃಗಳಿಗೆ ಕೋವಿಡ್ ಲಸಿಕೆ ಮತ್ತು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದ ವರದಿ ಕಡ್ಡಾಯ ಮಾಡಲಾಗಿತ್ತು. ಹಾಳೆ ತಟ್ಟೆ ಮೂಲಕ ಬಫೆ ಮಾದರಿಯಲ್ಲಿ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net