

ನ್ಯಾಮತಿ: ಸಂತ ಸೇವಾಲಾಲ್ ಅವರ ಜನ್ಮಸ್ಥಳ ತಾಲೂಕಿನ ಸೂರಗೊಂಡನಕೊಪ್ಪದದಲ್ಲಿ ಮಾ.28ರಂದು ಇದೇ ಮೊದಲ ಬಾರಿಗೆ ಹೋಳಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸೇವಾಲಾಲ್ ಮಹಾಮಠ ನಿರ್ವಹಣಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಾ.27ರ ಸಂಜೆ 6 ಗಂಟೆಗೆ ನಗಾರಿ ಭಾರಿಸುವುದರೊಂದಿಗೆ ಸಾಂಪ್ರದಾಯಿಕ ಹಾಡು (ಲೆಂಗಿ), ನೃತ್ಯಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. 28ರ ಬೆಳಗ್ಗೆ ಕಾಮದಹನ, ಹೋಮ ಕುಂಡದ ಬಳಿ ಭೋಗ್ ಪೂಜೆ, ಓಕುಳಿ ಕಾರ್ಯಕ್ರಮ, ನಂತರ ಪ್ರಸಾದ ವಿನಿಯೋಗ ಜರುಗಲಿದೆ. ಪ್ರತಿವರ್ಷ ಇದು ಮುಂದುವರಿಯಲಿದೆ ಎಂದು ಸಮಿತಿ ಅಧ್ಯಕ್ಷ ಡಾ.ಈಶ್ವರನಾಯ್ಕ, ಗೌರವಾಧ್ಯಕ್ಷ ಎಸ್.ಎನ್.ಗೋಪಾಲನಾಯ್ಕ, ಸಹಕಾರ್ಯದರ್ಶಿ ಜಿ.ಶಿವರಾಮನಾಯ್ಕ ತಿಳಿಸಿದ್ದಾರೆ.