ಹೋರಾಟಗಾರರ ಆದರ್ಶ ಮೈಗೂಡಿಸಿಕೊಳ್ಳಿ

sevadal
Published on

ಚಿಕ್ಕಮಗಳೂರು: ದೇಶಕ್ಕಾಗಿ ಯುವಜನರು ಸ್ವಾತಂತ್ರ್ಯೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರ್ ಹೇಳಿದರು.

ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೇವಾದಳದ ನೇತಾರ ಐಎನ್​ಎ ರಾಮರಾವ್ ಅವರ ಪುಣ್ಯ ಸ್ಮರಣೆಯಲ್ಲಿ ಮಾತನಾಡಿದರು.

ಯುವ ಜನತೆ ನಮ್ಮತನ ಅರಿತುಕೊಳ್ಳಬೇಕು. ಸ್ವಾತಂತ್ರ್ಯೋರಾಟಗಾರರ ಜೀವನ ಚರಿತ್ರೆ ಓದಿ ಅವರ ಹಾಗೆ ಬದುಕಲು ಪ್ರಯತ್ನಿಸಿ ರಾಷ್ಟ್ರೀಯತೆ ಬೆಳೆಸಿಕೊಳ್ಳಬೇಕು ಎಂದರು.

ತಾಲೂಕು ಸಂಘಟಕ ಎಸ್.ಇ.ಲೋಕೇಶ್ವರಾಚಾರ್ ಮಾತನಾಡಿ, ಐಎನ್​ಎ ರಾಮರಾವ್ ಅವರು ಭಾರತ ಸೇವಾದಳ ಕಟ್ಟಲು ಸಂಸ್ಥಾಪಕ ನಾಸು ಹರ್ಡಿಕರ್ ಅವರೊಂದಿಗೆ ಹೆಗಲುಕೊಟ್ಟು ದುಡಿದರು. ನೇತಾಜಿ ಸುಭಾಷ್​ಚಂದ್ರ ಬೋಸ್ ಅವರ ಒಡನಾಡಿಯಾಗಿದ್ದ ರಾಮರಾವ್ ಭಾರತ ಸೇವಾದಳಕ್ಕಾಗಿ ಜೀವನ ಸವೆಸಿ ಸೇವೆಗಾಗಿ ಬಾಳು ಎಂಬಂತೆ ಬದುಕಿದವರು ಎಂದರು.

ಕಡೂರು ತಾಲೂಕು ಪಿ.ಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೈ.ಕೆ.ರವಿ ಅವರಿಗೆ ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಮುಖ್ಯಶಿಕ್ಷಕಿ ಬಿ.ಆರ್.ಗೀತಾ, ಜಿಲ್ಲಾ ಸಂಘಟಕ ಚಂದ್ರಕಾಂತ್, ಕುಮಾರ್, ಶಿಕ್ಷಕಿಯರಾದ ಜಯಂತಿ, ಸಾವಿತ್ರಿ, ನಾಗವೇಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net