

ಹುಬ್ಬಳ್ಳಿ : ಸೇವಾ ಭಾರತಿ ಟ್ರಸ್ಟಿನ ವಿದ್ಯಾವಿಕಾಸ ಪ್ರಕಲ್ಪದ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರಗಳ ಶಿಕ್ಷಕಿಯರಿಗೆ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿರುವ ಸೇವಾಸದನದಲ್ಲಿ ಅಭ್ಯಾಸ ವರ್ಗವನ್ನು ಭಾನುವಾರ ಆಯೋಜಿಸಲಾಗಿತ್ತು.
ಅಭ್ಯಾಸ ವರ್ಗದಲ್ಲಿ ವಿದ್ಯಾವಿಕಾಸ ಪ್ರಾಂತ ಸಂಘಟನಾ ಕಾರ್ಯದರ್ಶಿ ಶಂಕರ ಗುಮಾಸ್ತೆ ಅವರು ಸುಪೋಷಿತ ಭಾರತ ಅಭಿಯಾನ -2025ರ ಕುರಿತು ಮಾಹಿತಿ ನೀಡಿ, ನಮ್ಮ ಮನೆಪಾಠ ಕೇಂದ್ರಗಳಲ್ಲಿ ಬರುವ ಮಕ್ಕಳ ಜತೆಗೆ ಬಸ್ತಿಯಲ್ಲಿರುವ ಮಕ್ಕಳನ್ನು ಹಾಗೂ ಪಾಲಕರನ್ನು ಸೇರಿಸಿ ಪೌಷ್ಟಿಕಾಹಾರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ವಿದ್ಯಾವಿಕಾಸ ಪ್ರಕಲ್ಪ ಸಮಿತಿಯ ಪ್ರಾಂತ ಅಧ್ಯಕ್ಷೆ ಭಾರತಿ ನಂದಕುಮಾರ, ಕೇಂದ್ರಗಳಲ್ಲಿ ನಡೆದ ಚಟುವಟಿಕೆಗಳ ವರದಿ ವಾಚಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಹುಬ್ಬಳ್ಳಿ ಸೆಂಟ್ರಲ್ನ ಜ್ಯೋತಿ ನಡಕಟ್ಟಿ ಮತ್ತು ಅವರ ತಂಡದ ಸದಸ್ಯರು ನವರಾತ್ರಿ ಉತ್ಸವ ಹಾಗೂ ದೀಪಾವಳಿ ಹಬ್ಬದ ನಿಮಿತ್ತ ಅಲಂಕಾರವಾಗಿ ಮಣ್ಣಿನ ಹಣತೆಗಳ ಮಾಡುವುದನ್ನು ಹೇಳಿಕೊಟ್ಟರು.
ಗೋಪಾಲ ಮಗಜಿಕೊಂಡಿ, ಶ್ರೀನಿವಾಸ ವಂಟಮನಿ, ಪೂಜಾ ಲಾತುಸ್ಕರ, ವೀಣಾ ಹೂಗಾರ, ಕೇತನಾ ನಂದಿಗೊನ, ಮಲ್ಲಮ್ಮ ವಾಲ್ಮೀಕಿ, ಶಿಲ್ಪಾ ಭಾವುಟೆ ಹಾಗೂ ಇತರರು ಉಪಸ್ಥಿತರಿದ್ದರು.