

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಆರ್.ಎಸ್. ಹೂಗಾರ ದತ್ತಿ ಅಂಗವಾಗಿ ಮಾ. 14ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆರ್.ಎಸ್. ಹೂಗಾರ ಸೇವಾರತ್ನ ಪ್ರಶಸ್ತಿ- 2025 ಪ್ರದಾನ ಹಾಗೂ ಕಲಿಕಾ ಪ್ರೋತ್ಸಾಹಧನ ವಿತರಣಾ ಸಮಾರಂಭ ಆಯೋಜಿಸಿದೆ. ನಗರದ ಹಿರಿಯ ಲೆಕ್ಕಪರಿಶೋಧಕ ವಿಜಯ ಪಂಚಪ್ಪ ಅವರಿಗೆ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ವಸಂತ ಲದ್ವಾ ಅವರು ಆರ್.ಎಸ್. ಹೂಗಾರ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡುವರು. ಹಿರಿಯ ಲೆಕ್ಕಪರಿಶೋಧಕ ಪಿ.ಎಂ. ಮುದಿಗೌಡರ ಅಥಿತಿಯಾಗಿ ಪಾಲ್ಗೊಳ್ಳುವರು. ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.