ಗಿಡ ಬೆಳೆಸಿ ಹವಾಮಾನ ವೈಪರೀತ್ಯ ತಪ್ಪಿಸಿ: ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಸದಾನಂದ ಕರೆ

Seva Pakshika from BJP Mandya
Published on

ಮಂಡ್ಯ: ಪರಿಸರ ಸಂರಕ್ಷಣೆ ಮತ್ತು ಹವಾಮಾನ ವೈಪರೀತ್ಯ ತಪ್ಪಿಸಲು ಗಿಡ ನೆಟ್ಟು ಬೆಳೆಸುವುದು ಅತಿಮುಖ್ಯವಾಗಿದೆ ಎಂದು ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಸದಾನಂದ ಹೇಳಿದರು.

ತಾಲೂಕಿನ ಕೀಲಾರ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ, ರಾಜ್ಯ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಸೇವಾ ಪಾಕ್ಷಿಕ ಅಂಗವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಿಡ ಬೆಳೆಸುವುದರಿಂದ ನಮಗೆ ಬಿಸಿಲಿನ ತಾಪದಲ್ಲಿ ನೆರಳನ್ನು ನೀಡುತ್ತದೆ. ಉತ್ತಮ ಗಾಳಿ ಸಿಗುವುದಲ್ಲದೆ ಹವಾಮಾನ ವೈಪರೀತ್ಯವನ್ನು ತಡೆಯಬಹುದಾಗಿದೆ. ಸುತ್ತಮುತ್ತಲ ಪರಿಸರವು ಅಂದವಾಗಿ ಕಾಣುವುದರ ಜೊತೆಗೆ ಶುದ್ಧ ಗಾಳಿಯು ಬರುತ್ತದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಿಡ ಮರ ಸಂರಕ್ಷಣೆ ಮಾಡುವುದರಿಂದ ನಮ್ಮ ಪೂರ್ವಿಕರು ದೀರ್ಘಕಾಲ ಬದುಕುತ್ತಿದ್ದರು. ಪರಿಸರ ಸಂರಕ್ಷಣೆಯಿಂದ ನಮ್ಮ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಮಹತ್ತರ ಕೊಡಿಗೆಯಾಗಿದೆ. ಪರಿಸರ ಸಂರಕ್ಷಣೆಯು ನಮ್ಮೆಲ್ಲರು ಹೊಣೆಯಾಗಬೇಕು. ಮನುಷ್ಯನ ಆರೋಗ್ಯ ಚೆನ್ನಾಗಿರಬೇಕಾದರೆ ಮನೆಗೊಂದು ಮರವನ್ನು ಬೆಳೆಸುವ ಮನೋಭಾವ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಗ್ರಾಮಾಂತರ ತಾಲೂಕು ಅಧ್ಯಕ್ಷ ಭೀಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಮುಖಂಡರಾದ ಕೀಲಾರ ಯೋಗೇಶ್, ಎಚ್.ಅರ್.ಅಶೋಕ್‌ಕುಮಾರ್, ಶಿವಕುಮಾರ ಆರಾಧ್ಯ, ಕಿರಣ್, ಶಿವಾನಂದ್, ಕೃಷ್ಣೇಗೌಡ, ರವೀಂದ್ರ, ಪ್ರಸನ್ನ, ಚಂದ್ರು, ಹರ್ಷ ಇದ್ದರು. ಇದೇ ಸಂದರ್ಭದಲ್ಲಿ ಕೀಲಾರ ಗ್ರಾಮದ ದೇವಾಲಯದ ಆವರಣದಲ್ಲಿ ನೇರಳೆ, ಹೊಂಗೆ ಸೇರಿದಂತೆ ವಿವಿಧ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net