ಸೇವಾಭಾರತಿಯಿಂದ ಪುನರ್ವಸತಿ ಕೇಂದ್ರ, ಇನ್ಫೋಸಿಸ್ ನೆರವಿನಲ್ಲಿ ನಿರ್ಮಾಣ

seva
Published on

ಮಂಗಳೂರು: ಸೇವಾಭಾರತಿ ಸಂಸ್ಥೆ ಇನ್ಫೋಸಿಸ್ ಪ್ರತಿಷ್ಠಾನದ ನೆರವಿನಲ್ಲಿ 14 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಶಾಶ್ವತ ಪುನರ್ವಸತಿ ಕೇಂದ್ರವನ್ನು ಅಂಗವಿಕಲ ಮಕ್ಕಳಿಗಾಗಿ ನಿರ್ಮಿಸಲು ಮುಂದಾಗಿದೆ.

ಶಿಲಾನ್ಯಾಸ ಅ.23ರಂದು ನೆರವೇರಲಿದೆ. ಬಂಟ್ವಾಳ ತಾಲೂಕು ನರಿಂಗಾನದ ಮೊಂಟೆಪದವು ಎಂಬಲ್ಲಿ ಈ ಕೇಂದ್ರ ತಲೆಯೆತ್ತಲಿದೆ.

ಇದರಲ್ಲಿ ವಿಶೇಷ ಮಕ್ಕಳ ಸಾಮಾನ್ಯ ಶಾಲೆ, ವಸತಿ ಶಾಲೆ, ವಿಶೇಷ ಶಾಲೆ ಶಿಕ್ಷಕರ ತರಬೇತಿ ಕೇಂದ್ರ, ಕೌಶಲಾಭಿವೃದ್ಧಿ ಕೇಂದ್ರ, ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಸ್ಟೆಲ್, ನಿರಂತರ ಫಿಸಿಯೊಥೆರಪಿ ಚಿಕಿತ್ಸೆ ಇತ್ಯಾದಿ ಇರಲಿದೆ.

23ರಂದು ಬೆಳಗ್ಗೆ 10.30ಕ್ಕೆ ಶಿಲಾನ್ಯಾಸ ಸಮಾರಂಭ ಮೊಂಟೆಪದವಿನಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net