ಸೇವಾ ಭಾರತಿ ಕಾರ್ಯ ಶ್ಲಾಘನೀಯ: ಡಾ.ಬಿ.ನಾರಾಯಣ ನಾಯ್ಕ ಅನಿಸಿಕೆ

bharathi
ಸೇವಾಭಾರತಿ ಜಿಲ್ಲಾ ಸಮ್ಮೇಳನವನ್ನು ಮಕ್ಕಳ ತಜ್ಞ ಡಾ.ಬಿ.ನಾರಾಯಣ ನಾಯ್ಕ ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ವೆಂಕಟರಮಣ ಹೊಳ್ಳ, ಆರ್‌ಎಸ್‌ಎಸ್ ಉತ್ತರ ವಲಯ ಕಾರ್ಯವಾಹ ಪಿ.ಎನ್.ಈಶ್ವರನ್, ಕಣ್ಣೂರು ವಿಭಾಗದ ಸೇವಾ ಪ್ರಮುಖ್ ಕೆ.ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.
Published on

ಕಾಸರಗೋಡು: ಲಾಕ್‌ಡೌನ್ ಸಂದರ್ಭದಲ್ಲಿ ಕೋವಿಡ್‌ನಿಂದ ಸಾವಿಗೀಡಾದ ರೋಗಿಗಳ ಅಂತ್ಯಸಂಸ್ಕಾರಕ್ಕೆ ಆರೋಗ್ಯ ಕಾರ್ಯಕರ್ತರೊಂದಿಗೆ ಸೇವಾ ಭಾರತಿ ಕಾರ್ಯಕರ್ತರು ನಿರ್ಭೀತಿಯಿಂದ ಸೇವೆ ಸಲ್ಲಿಸುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಖ್ಯಾತ ಮಕ್ಕಳ ತಜ್ಞ ಡಾ.ಬಿ.ನಾರಾಯಣ ನಾಯ್ಕ ತಿಳಿಸಿದ್ದಾರೆ.

ಅಣಂಗೂರಿನ ಶಾರದಾಂಬಾ ಸಭಾಭವನದಲ್ಲಿ ನಡೆದ ಸೇವಾ ಭಾರತಿ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಂಘಟನೆ ಜಿಲ್ಲಾಧ್ಯಕ್ಷ ಸಿ.ಕೆ.ವೇಣುಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ವೆಂಕಟರಮಣ ಹೊಳ್ಳ, ಆರ್‌ಎಸ್‌ಎಸ್ ಉತ್ತರ ವಲಯ ಕಾರ್ಯವಾಹ ಪಿ.ಎನ್.ಈಶ್ವರನ್, ಕಣ್ಣೂರು ವಿಭಾಗದ ಸೇವಾ ಪ್ರಮುಖ್ ಕೆ.ಪ್ರಮೋದ್, ಸೇವಾಭಾರತಿ ರಾಜ್ಯ ಕಾರ್ಯದರ್ಶಿ ಎಂ.ರಾಜೀವನ್, ಎಂ.ಕೆ.ಸಂಗೀತ ವಿಜಯನ್ ಮತ್ತು ಎಂ.ಟಿ.ದಿನೇಶ್ ಉಪಸ್ಥಿತರಿದ್ದರು.

ಪದಾಧಿಕಾರಿಗಳ ಆಯ್ಕೆ

ಸಿ.ಕೆ.ವೇಣುಗೋಪಾಲ್-ರಕ್ಷಾಧಿಕಾರಿ, ಎಂ.ಟಿ.ದಿನೇಶ್-ಅಧ್ಯಕ್ಷ, ಕೆ.ಬಾಲಕೃಷ್ಣನ್, ಟಿ.ವಿ.ಅಶೋಕ್ ಕುಮಾರ್, ಸತೀಶ್ ಕಮ್ಮತ್- ಉಪಾಧ್ಯಕ್ಷರು, ಎ. ಕೆ.ಸಂಗೀತಾ ವಿಜಯ್-ಪ್ರಧಾನ ಕಾರ್ಯದರ್ಶಿ, ಕೆ.ರಾಧಾಕೃಷ್ಣನ್, ಪ್ರತೀಕ್ ಆಳ್ವ, ಕೆ.ವಿ.ಲಕ್ಷ್ಮಣನ್, ಪಿ.ಬಿ.ಪ್ರೀತಾ ಉನ್ನಿ-ಕಾರ್ಯದರ್ಶಿ, ಸಿ.ಎ. ಯೆದಿನ್-ಕೋಶಾಧಿಕಾರಿ, ಕೆ.ಕೃಷ್ಣನ್ ಕುಟ್ಟಿ-ಜತೆ ಕೋಶಾಧಿಕಾರಿ, ಜಿ.ಅರ್ಜುನ್-ಮಾಧ್ಯಮ ಸಂಯೋಜಕ, ಕೆ. ಅಜಯ್ ಕಮ್ಮತ್-ಸಹಮಾಧ್ಯಮ ಸಂಯೋಜಕ ಹಾಗೂ ಕೆ.ವಿ.ಉನ್ನಿಕೃಷ್ಣನ್ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net