ಸೆಟಲ್ ಬ್ಯಾಡ್ಮಿಂಟನ್, ಲಿಂಗರಾಜ ಕಾಲೇಜು ಚಾಂಪಿಯನ್

IMG20241019130325.jpg
Published on

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ವಿಜಯಪುರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕವಲಯ ಸೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಕೆಎಲ್ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಪುರುಷ ಕ್ರೀಡಾಪಟುಗಳು ಕೆಎಲ್ಇ ಸಂಸ್ಥೆಯ ಆರ್.ಎಲ್.ವಿಜ್ಞಾನ ಮಹಾವಿದ್ಯಾಲಯದ ತಂಡವನ್ನು ಸೋಲಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿತು. ಪುಲಾರಾಮ ಚೌದರಿ ಮತ್ತು ಓಂಕಾರ ಕಳಸಣ್ಣವರ ಯುನಿವರ್ಸಿಟಿ ಬ್ಲೂ ಪ್ರಶಸ್ತಿಗೆ ಭಾಜನರಾದರು. ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಡಾ.ಎಚ್.ಎಸ್. ಮೇಲಿನಮನಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮಾರಾವ್ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net