ವಚನ ಅಧ್ಯಯನ ಪೀಠ ಸ್ಥಾಪಿಸಿ

Sandur Prabhuswamiji
ಸಂಡೂರಿನ ವಿರಕ್ತಮಠಕ್ಕೆ ಭೇಟಿ ನೀಡಿದ ಕನ್ನಡ ವಿವಿ ಕುಲಪತಿ ಡಾ.ಪರಮಶಿವಮೂರ್ತಿ ಅವರನ್ನು ವಿರಕ್ತಮಠದ ಶ್ರೀ ಪ್ರಭು ಸ್ವಾಮೀಜಿ ಸನ್ಮಾನಿಸಿದರು. ಕನ್ನಡ ವಿವಿ ಡಾ.ಕೆ.ರವೀಂದ್ರನಾಥ, ಕುಲಪತಿ ಪಿಎ ಕೃಪಾಶಂಕರ್ ಇದ್ದರು.
Published on

ಸಂಡೂರು: ಪಟ್ಟಣದ ವಿರಕ್ತಮಠಕ್ಕೆ ಕನ್ನಡ ವಿವಿ ಕುಲಪತಿ ಡಾ.ಪರಮಶಿವ ಮೂರ್ತಿ ಭೇಟಿ ನೀಡಿ ಶ್ರೀ ಪ್ರಭುಸ್ವಾಮೀಜಿ ಆಶೀರ್ವಾದ ಪಡೆದರು.

ಪ್ರಭು ಸ್ವಾಮೀಜಿ ಮಾತನಾಡಿ, ಕನ್ನಡ ವಿವಿಯಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸಬೇಕು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವಚನ ಅಧ್ಯಯನ ಪೀಠಕ್ಕೆ 13 ಕೋಟಿ ರೂ. ಬಿಡುಗಡೆ ಮಾಡಿದ್ದರು. ಅದು ಉನ್ನತ ಶಿಕ್ಷಣ ಸಚಿವಾಲಯಕ್ಕೆ ಬಂತು. ಅಷ್ಟರಲ್ಲಿ ಕರೊನಾ ಬಂದು ಅಡ್ಡಿಯಾಯಿತು. ಎಂ.ಎಂ.ಕಲ್ಬುರ್ಗಿ ನಂತರ ಒಳ್ಳೆಯ ವಿದ್ವಾಂಸರು ಬಂದಿದ್ದು, ಸರ್ಕಾರದ ಅನುದಾನ ಪಡೆದು ವಚನ ಅಧ್ಯಯನ ಪೀಠ ಆರಂಭಿಸುವಂತೆ ಕೋರಿದರು. ಕನ್ನಡ ವಿವಿಯ ಡಾ.ಕೆ.ರವೀಂದ್ರನಾಥ, ಕುಲಪತಿ ಪಿಎ ಕೃಪಾಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net