ಮಕ್ಕಳಿಗಾಗಿ ಸಮಯ ಮೀಸಲಿಡಿ

Set aside time for kids
ಗಲಗಲಿಯ ಗಾಲವ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ಆಯೊಜಿಸಿದ್ದ ವಿಶೇಷ ಚಿಂತನಗೋಷ್ಠಿಯನ್ನು ಧಾರವಾಡ ಬಾಲ ವಿಕಾಸ ಅಕಾಡಮೆ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟಿಸಿದರು. ಡಾ. ಎಂ.ಆರ್. ದೇಸಾಯಿ, ಎಚ್.ವೈ. ಜಿರಾಳಿ, ಹನುಮಂತ ಮಂಟೂರ, ದುಂಡಪ್ಪ ದೇಸಾಯಿ, ಜಿ.ಡಿ. ದೇಸಾಯಿ ಮತ್ತಿತರರಿದ್ದಾರೆ.
Published on

ಗಲಗಲಿ: ಮಕ್ಕಳ ಸರ್ವತೋಮುಖ ಅಭಿವೃದ್ಧಿ ಬಯಸುವ ಪಾಲಕರು ತಮ್ಮ ಮಕ್ಕಳಿಗಾಗಿ ಸಮಯ ಮೀಸಲಿರಿಸಬೇಕಾಗಿದೆ. ಬಹುತೇಕ ಪಾಲಕರು ಹೆಚ್ಚಿನ ಸಮಯವನ್ನು ಕೇವಲ ತಮ್ಮ ಕೆಲಸ ಕಾರ್ಯಗಳಲ್ಲೆ ಕಳೆಯುತ್ತಿರುವುದರಿಂದ ತಮ್ಮ ಮಕ್ಕಳ ಬಗ್ಗೆ ಲಕ್ಷೃ ನೀಡಲು ಸಾಧ್ಯವಾಗುತ್ತಿಲ್ಲ. ಅದು ಬೇಸರದ ಸಂಗತಿಯಾಗಿದೆ ಎಂದು ಧಾರವಾಡ ಬಾಲ ವಿಕಾಸ ಅಕಾಡಮೆ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ಗಾಲವ ಮಹರ್ಷಿ ಚಿಂತನ ವೇದಿಕೆಯವರು ಗಲಗಲಿಯ ಗಾಲವ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ಆಯೊಜಿಸಿದ್ದ ವಿಶೇಷ ಚಿಂತನಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ನಾವು ಉತ್ತಮ ಸಂಸ್ಕಾರ ನೀಡಿದರೆ ಅವರು ಮನೆಯಲ್ಲಿರುವ ಹಿರಿಯರನ್ನು ಗೌರವಯುತವಾಗಿ ನೋಡುತ್ತಾರೆ ಹಾಗೂ ತಂದೆ ತಾಯಿಗಳಿಗೆ ಅನಾಥಪ್ರಜ್ಞೆ ಕಾಡದಂತೆ ಸಂತೋಷವಾಗಿ ಕಾಲಕಳೆಯಲು ನೆರವಾಗುತ್ತಾರೆ. ಅಂಥ ಸಂಸ್ಕಾರ ಇಂದಿನ ಮಕ್ಕಳಿಗೆ ನಾವು ಅವಶ್ಯವಾಗಿ ನೀಡಬೇಕಾಗಿದೆ ಎಂದರು.

ಇಂದಿನ ಸಮಾಜಕ್ಕೆ ಮುಖ್ಯವಾಗಿ ಬೇಕಾಗಿರುವುದು ಅಧ್ಯಾತ್ಮ. ಮಕ್ಕಳನ್ನು ಸತ್ಸಂಗದ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರುವುದರಿಂದ ಹಿರಯರಲ್ಲಿನ ಒಳ್ಳೆಯ ವಿಚಾರಗಳು ಎಳೆಯ ಮನಸ್ಸುಗಳಮೇಲೆ ಪ್ರಭಾವ ಬೀರುತ್ತದೆ. ಮೊಬೈಲ್‌ನಿಂದ ಮಕ್ಕಳನ್ನು ದೂರವಿಟ್ಟು ಎಲ್ಲರೂ ಒಟ್ಟಿಗೆಕುಳಿತು ಸಂತೋಷದಿಂದ ಊಟಮಾಡುವ ಪದ್ಧತಿ ರೂಢಿಸಿಕೊಳ್ಲಬೆಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪರಿಸರ ತಜ್ಞ ಡಾ. ಎಂ.ಆರ್. ದೇಸಾಯಿ ಮಾತನಾಡಿ, ಬದುಕಿನನಲ್ಲಿ ಕೇವಲ ಹಣದ ಬೆನ್ನುಹತ್ತದೇ ಯುವಜನಾಂಗಕ್ಕೆ ಉತ್ತಮ ಸಂಸ್ಕಾರ ನೀಡಬೇಕಾಗಿದೆ ಎಂದರು.

ಬಾಲ ವಿಕಾಸ ಅಕಾಡಮಿ ಸದಸ್ಯ ಎಚ್.ವೈ. ಜಿರಾಳಿ, ಹನುಮಂತ ಮಂಟೂರ, ದುಂಡಪ್ಪ ದೇಸಾಯಿ, ಜಿ.ಡಿ. ದೇಸಾಯಿ, ಬಾಬು ನಿಡೋಣಿ, ನಿಂಗಣ್ಣ ಗೋಳಿಪಲ್ಲೆ ಮತ್ತಿತರರಿದ್ದರು. ಸುನೀಲಗೌಡ ನ್ಯಾಮಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ರಂಗಣ್ಣ ಬಿರಾದಾರ ನಿರೂಪಿಸಿದರು. ಎಂ ಪಿ ಕಾಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net