ಒಂದು ಸಸಿಗೆ 40 ಪೈಸೆ ನಿಗದಿ ಪಡಿಸಿ

ಕುರುಗೋಡು ತಾಲೂಕು ಆಡಳಿತ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನರ್ಸರಿ ಮಾಲೀಕರು ಹಾಗೂ ರೈತರ ಸಭೆಯಲ್ಲಿ ತಹಸೀಲ್ದಾರ್ ನರಸಪ್ಪ ಮಾತನಾಡಿದರು.ಉಪ ತಹಸೀಲ್ದಾರ್ ವಿಜಯ ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರತ್ನಪ್ರಿಯಾ ಆರ್.ಎರಗಲ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಸ್.ಶಿವಶಂಕರ್, ಇತರರಿದ್ದರು.

Published on

ಕುರುಗೋಡು: ನರ್ಸರಿ ಮಾಲಿಕರು ರೈತರಿಗೆ ತೊಂದರೆಯಾಗದಂತೆ ಸಕಾಲಕ್ಕೆ ಗುಣಮಟ್ಟದ ಮೆಣಸಿನಕಾಯಿ ಸಸಿ ನೀಡಬೇಕು. ನಿಗದಿತ ಬೆಲೆಗಿಂತ ಅಧಿಕ ಹಣ ಪಡೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ನರಸಪ್ಪ ಹೇಳಿದರು.

ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ, ತೋಟಗಾರಿಕೆ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ನರ್ಸರಿ ಮಾಲೀಕರು ಹಾಗೂ ರೈತರ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯುವ ರೈತರಿದ್ದು, ಗುಣಮಟ್ಟದ ಬೆಳೆ ಬೆಳೆಯಲು ನರ್ಸರಿಯಲ್ಲಿ ಬೆಳೆಸಿದ ಸಸಿ ಖರೀದಿಸುತ್ತಾರೆ. ಆದ್ದರಿಂದ ನರ್ಸರಿ ಮಾಲಿಕರು ಕಡ್ಡಾಯವಾಗಿ ನೋಂದಣಿ ಮಾಡಿಸಿ ಜಿಎಸ್‌ಟಿ ಹೊಂದಿರಬೇಕು. ನರ್ಸರಿ ಮುಂದೆ ಒಂದು ಸಸಿಯ ದರ, ಜಿಎಸ್‌ಟಿ ಮತ್ತು ನೋಂದಣಿ ಸಂಖ್ಯೆ ಮಾಹಿತಿ ಇರುವ ಬೋರ್ಡ್ ಹಾಕಬೇಕು. ಒಂದು ಸಸಿಗೆ 40 ಪೈಸೆ ನಿಗದಿ ಪಡಿಸಬೇಕು. ನಿಯಮ ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರತ್ನಪ್ರಿಯಾ ಆರ್.ಎರಗಲ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಸ್.ಶಿವಶಂಕರ್, ತೋಟಗಾರಿಕೆ ಇಲಾಖೆ ಅಧಿಕಾರಿ ವಸಂತ, ರೈತ ಸಂಘದ ಕಾರ್ಯದರ್ಶಿ ಗಾಳಿ ಬಸವರಾಜ, ಪ್ರಮುಖರಾದ ಕಿರಣ್, ಟಿ.ಅಮೀನ್ ಸೋಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net