ಡಯಾಲಿಸಿಸ್​ ಘಟಕ ಅವ್ಯವಸ್ಥೆ ಸರಿಪಡಿಸಲು ಯಶ್ಪಾಲ್​ ಆಗ್ರಹ

udp-yashpal suvarna
Published on

ಉಡುಪಿ: ರಾಜ್ಯಾದ್ಯಂತ ಡಯಾಲಿಸಿಸ್​ ಟಕ ಆವ್ಯವಸ್ಥೆ ಸರಿಪಡಿಸುವಂತೆ ಉಡುಪಿ ಶಾಸಕ ಯಶ್​ ಪಾಲ್​ ಸುವರ್ಣ ವಿಧಾನ ಸಭೆ ಅಧಿವೇಶನದಲ್ಲಿ ಆಗ್ರಹಿಸಿದ್ದಾರೆ.

ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್​ ಸೇವೆ ಸ್ಥಗಿತಗೊಂಡಿತ್ತು. ನಂತರ ದಾನಿಗಳ ಸಹಕಾರದಲ್ಲಿ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಇತ್ತೀಚೆಗೆ 11 ಟಕಗಳಲ್ಲಿ ಕೇವಲ 5 ಟಕ ದುರಸ್ತಿಗೊಳಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಗುತ್ತಿಗೆ ಪಡೆದ ಕಂಪೆನಿಯಿಂದ ಬಹಳಷ್ಟು ತೊಂದರೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಲಭ್ಯವಿಲ್ಲದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಅದರ ವೆಚ್ಚವನ್ನು ಸರ್ಕಾರ ಭರಿಸುವಂತೆ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​, ಜನರಿಗೆ ಹೆಚ್ಚಿನ ಬೇಡಿಕೆ ಇರುವ ಡಯಾಲಿಸಿಸ್​ ಸೇವೆ ಸಮರ್ಪಕವಾಗಿ ನೀಡುವುದು ಸರ್ಕಾರದ ಕರ್ತವ್ಯ. ಈ ಹಿಂದಿನ ಏಜೆನ್ಸಿ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಅದಕ್ಕಾಗಿ ದಂಡವನ್ನೂ ವಿಧಿಸಿದ್ದೇವೆ. ಬೆಂಗಳೂರು ಮತ್ತು ಮೈಸೂರು ವಿಭಾಗಕ್ಕೆ 2 ಟೆಂಡರ್​ ಕರೆಯಲಾಗಿದೆ. ಒಂದು ತಿಂಗಳಲ್ಲಿ ಎಲ್ಲಾ ಕಡೆ ಹೊಸ ಡಯಾಲಿಸಿಸ್​ ಯಂತ್ರ ಅಳವಡಿಸಲಾಗುತ್ತದೆ. ಟೆಕ್ನೀಶಿಯನ್ಗಳ ನೇಮಕವೂ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net