ಶೇಷೋತ್ಸವ ಮೆರವಣಿಗೆ ಅದ್ದೂರಿ

12knk6
ಕನಕಗಿರಿಯ ರಾಜಬೀದಿಯಲ್ಲಿ ಕನಕಾಚಲ ಜಾತ್ರೆ ಅಂಗವಾಗಿ ಭಾನುವಾರ ಶೇಷೋತ್ಸವ ಮೆರವಣಿಗೆ ಜರುಗಿತು.
Published on

ಕನಕಗಿರಿ: ಕನಕಾಚಲಪತಿ ಜಾತ್ರೆ ನಿಮಿತ್ತ ಏಳನೆಯ ದಿನವಾದ ಭಾನುವಾರ ಪಟ್ಟಣದ ರಾಜಬೀದಿಯಲ್ಲಿ ಶೇಷೋತ್ಸವ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.


ಉತ್ಸವ ನಿಮಿತ್ತ ಕಾಮಾಟಿಗರು(ಜಾತ್ರಾ ಕಾರ್ಮಿಕರು) ಸಿದ್ಧತೆ ಕೈಗೊಂಡಾಗ ದೇವಸ್ಥಾನದಲ್ಲಿ ಅರ್ಚಕರು ಅನ್ನಬಲಿ, ಉತ್ಸವ ಮೂರ್ತಿಗಳಿಗೆ ಪುಷ್ಪಲಂಕಾರ ಮಾಡಿದರು. ನಂತರ ಮಂತ್ರ ಘೋಷದೊಂದಿಗೆ ಉತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ರಾಜಬೀದಿಯಲ್ಲಿ ಸಾಗಿ ತೇರಿನ ಹನುಮಪ್ಪ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು. ಭಕ್ತರು ಆರತಿ, ಹೂವಿನಹಾರ ಅರ್ಪಿಸಿದರು.

ಅರ್ಚಕರಾದ ಪ್ರದೀಪ್, ಸಿಂಗರಾಚಾರ್ಯ, ಭಕ್ತರಾದ ಸುದರ್ಶನ ರಡ್ಡಿ, ಭೀಮರಡ್ಡಿ ಗುಂಜಳ್ಳಿ, ಕಾಮಾಟಿಗರಾದ ವೆಂಕಟೇಶ, ಕನಕಪ್ಪ ಮಲ್ಲಾಪುರಿ, ಕನಕರಡ್ಡಿ ಮಹಲಿನಮನಿ, ಮೌಲಾ, ನರಸಿಂಹರಡ್ಡಿ, ಪ್ರಕಾಶರಡ್ಡಿ ಓಣಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net