

ಮಧೂರು: ಕೂಡ್ಲು ಶೇಷವನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ತೆಂಕು ಭಾಗದ ಸುತ್ತು ಗೋಪುರದ ಶಿಲಾನ್ಯಾಸವನ್ನು ತಂತ್ರಿ ಅರವತ್ ಪದ್ಮನಾಭ ತಂತ್ರಿ ಆಶೀರ್ವಾದದೊಂದಿಗೆ ದೇವಸ್ಥಾನದ ಶಿಲ್ಪಿ ರಮೇಶ್ ಕಾರಂತರ ಮಾರ್ಗದರ್ಶನದಲ್ಲಿ ಅರವತ್ ನಾರಾಯಣ ತಂತ್ರಿ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಾಯ ಕಾರಂತ ಭೂಮಿಪೂಜೆ ನೆರವೇರಿಸಿದರು.
ಶಿಲಾನ್ಯಾಸ ಬಳಿಕ ಸಭಾ ಕಾರ್ಯಕ್ರಮ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಉದ್ಘಾಟಿಸಿ ದೇವಸ್ಥಾನಗಳಲ್ಲಿ ಸುತ್ತು ಗೋಪುರಗಳ ಪ್ರಾಧಾನ್ಯ ವಿವರಿಸಿದರು. ಶೇಷವನ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ವೇಣುಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಆನುವಂಶಿಕ ಮೊಕ್ತೇಸರ ಸದಾಶಿವ, ಟ್ರಸ್ಟ್‌ನ ಕಾರ್ಯದರ್ಶಿ ಗೋಪಾಲಕೃಷ್ಣ ಪಾಯಿಚ್ಚಾಲ್, ವಾರ್ಡ್ ಸದಸ್ಯ ಸಂಪತ್ ಪೆರ್ನಡ್ಕ, ಆಶಾ ಉಪಾಧ್ಯಾಯ, ಶೇಷವನ ಮಹಿಳಾ ಸಂಘದ ಕಾರ್ಯದರ್ಶಿ ಪ್ರಮೀಳಾ, ಯುವಕ ಸಂಘದ ಅಧ್ಯಕ್ಷ ಸನತ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು. ಸುರೇಶ ಮಣಿಯಾಣಿ ಸ್ವಾಗತಿಸಿದರು. ಪ್ರಕಾಶ ಶೆಟ್ಟಿ ವಂದಿಸಿದರು. ಯುವಕ ಸಂಘದ ಕಾರ್ಯದರ್ಶಿ ರಾಹುಲ್ ಪಾಯಿಚ್ಚಾಲ್ ನಿರೂಪಿಸಿದರು.