ಶೇಷಗಿರಿರಾವ್​ ಕಾರ್ಯ ಸ್ಮರಣೀಯ

27 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂಗ್ಲಿಷ ಸಾಹಿತ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದವರಲ್ಲಿ ಮೊದಲಿಗರಲ್ಲದೇ ಕನ್ನಡ ಸಾಹಿತ್ಯದಲ್ಲಿ ವಿಮರ್ಶಾ ಲೋಕಕ್ಕೆ ಮಾರ್ಗ ಹಾಕಿಕೊಟ್ಟವರು ಪ್ರೊ. ಎಲ್​.ಎಸ್​. ಶೇಷಗಿರಿರಾವ್​ ಎಂದು ಬೆಂಗಳೂರಿನ ಹಿರಿಯ ಲೇಖಕ ರಾ.ನಂ. ಚಂದ್ರಶೇಖರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದ ದಿ. ಪ್ರೊ. ಎಲ್​.ಎಸ್​. ಶೇಷಗಿರಿರಾವ್​ ಜನ್ಮದಿನ ನಿಮಿತ್ತ ಭಾನುವಾರ ಆಯೋಜಿಸಿದ್ದ ಎಲ್​ ಎಸ್​ ಎಸ್​ ಅವರ ಬದುಕು&ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೂರಾರು ಕನ್ನಡ ಚಳವಳಿಗಳಲ್ಲಿ ಭಾಗವಹಿಸಿ ಕನ್ನಡ ಭಾಷೆ ಉಳಿವಿಗೆ ಜೀವ ಸವೆಸಿದವರು. ಶೇಷಗಿರಿ ಅವರದ್ದು ದೈತ್ಯ ಶಕ್ತಿ. ಸಾಹಿತಿ, ಚಳವಳಿಗಾರ, ಆಡಳಿತಗಾರ, ಶಿಕರಾಗಿ ಹೀಗೆ ಬಹುಮುಖವಾಗಿ ಜೀವನದುದ್ದಕ್ಕೂ ಕಾರ್ಯ ಮಾಡಿದರು. ಯಾರಿಗೂ ಕೇಡು ಬಯಸದೇ ಕನ್ನಡ ನೆಲವನ್ನು ಶ್ರೀಮಂತಗೊಳಿಸಿದವರು. ಸಾಹಿತ್ಯ ಪರಿಷತ್ತಿನ ಕಾರ್ಯದಶಿರ್ಯಾಗಿ ಪುಸ್ತಕ ಪ್ರಾಧಿಕಾರದ ಅಧ್ಯರಾಗಿ ಮಾಡಿದ ಕಾರ್ಯ ಅವೀಸ್ಮರಣೀಯವಾದದ್ದು ಎಂದರು.
ಡಾ. ಜಿ. ಎಂ. ಹೆಗಡೆ ಶೇಷಗಿರಿರಾವ್​ ಬದುಕು&ಬರಹ ಕುರಿತು ಮಾತನಾಡಿ, ಎಲ್​.ಎಸ್​. ಶೇಷಗಿರಿರಾವ್​ ಹತ್ತಾರು ಕನ್ನಡ ಚಳವಳಿಗಳನ್ನು ಬೆಂಗಳೂರು ನೆಲದಲ್ಲಿ ಕಟ್ಟಿದವರು. ಅಂದಿಗಿಂತ ಇಂದು ಕನ್ನಡ ಚಳವಳಿಗಳ ಅವಶ್ಯಕತೆ ಇದೆ. ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರ ನೇಮಕಾತಿ ಇಲ್ಲ. ಕನ್ನಡ ಪ್ರಾಥಮಿಕ ಶಾಲೆಗಳು ಮುಚ್ಚಿಕೊಳ್ಳುತ್ತಿವೆ. ಇವುಗಳ ವಿರುದ್ಧ ಕನ್ನಡಿಗರು ಬೀದಿಗಿಳಿದು ಹೋರಾಟ ಮಾಡಬೇಕಿದೆ. ಜ್ಞಾನ ಭಾರತಿ, ಕನ್ನಡ ಭಾರತಿ, ಕಿರಿಯರ ಕರ್ನಾಟಕ ಹೀಗೆ ಬೃಹತ್​ ಗ್ರಂಥಗಳನ್ನು ನೀಡಿದಂತೆ ಇನ್ನೊಬ್ಬರು ನೀಡಿಲ್ಲ. ಶೇಷಗಿರಿರಾವ್​ ನುಡಿದಂತೆ ಬದುಕಿದರು. ಬದುಕಿದಂತೇ ನುಡಿದರು. ಪ್ರಗತಿಶೀಲ ಸಾಹಿತ್ಯದಲ್ಲಿ ಬಹುದೊಡ್ಡ ಕಾರ್ಯ ಮಾಡಿದರು ಎಂದರು.
ಹಾವೇರಿಯ ಗಳಗನಾಥ, ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯ ಪ್ರೊ. ದುಷ್ಯಂತ ನಾಡಗೌಡ ಅಧ್ಯತೆ ವಹಿಸಿದ್ದರು. ಸಂದ ಅಧ್ಯ ಚಂದ್ರಕಾಂತ ಬೆಲ್ಲದ, ಡಾ. ಅರವಿಂದ ಯಾಳಗಿ, ಡಾ. ಶಾಮಸುಂದರ ಬಿದರಕುಂದಿ, ಅಶೋಕ ನಿಡವಣಿ, ಲಕ್ಷಿ$್ಮ ಕೊಟಗುಣಸಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net