ದೇವದಾನ ಗ್ರಾಪಂಗೆ ಶೇಷಪ್ಪಗೌಡ ಅಧ್ಯಕ್ಷ

bhr gp
ದೇವದಾನ ಗ್ರಾಪಂ ಅಧ್ಯಕ್ಷ ಶೇಷಪ್ಪಗೌಡ, ಉಪಾಧ್ಯಕ್ಷೆ ಶೀಲಾವತಿ ಅವರನ್ನು ಸದಸ್ಯರು, ಬಿಜೆಪಿ ಮುಖಂಡರು ಅಭಿನಂದಿಸಿದರು. ಭಾಸ್ಕರ್ ವೆನಿಲ್ಲಾ, ಮಾಗಲು ಪ್ರವೀಣ್, ಖಾಂಡ್ಯ ಪ್ರವೀಣ್, ವೆಂಕಟೇಶ್, ರಘು ಉಜ್ಜಯಿನಿ, ನಂದೀಶ್ ಇತರರಿದ್ದರು.
Published on

ಬಾಳೆಹೊನ್ನೂರು: ದೇವದಾನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶೇಷಪ್ಪಗೌಡ, ಉಪಾಧ್ಯಕ್ಷೆಯಾಗಿ ಶೀಲಾವತಿ ಅವಿರೋಧವಾಗಿ ಆಯ್ಕೆಯಾದರು.

ಬುಧವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಶೇಷಪ್ಪಗೌಡ, ಶೀಲಾವತಿ ಮಾತ್ರ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿ ತಾರಾನಾಥ್, ಉಪ ಚುನಾವಣಾಧಿಕಾರಿಯಾಗಿ ಉದಯಕುಮಾರ್ ಕಾರ್ಯನಿರ್ವಹಿಸಿದರು. ಸದಸ್ಯರಾದ ಸರೋಜಾ, ಎಚ್.ಕೆ.ಸಂಪತ್, ಪ್ರೀತಿ, ಮಲ್ಲಿಕಾ, ಗೀತಾ, ಲಕ್ಷ್ಮೀ, ದ್ರಾಕ್ಷಾಯಿಣಿ, ಮದನ್, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ಹೋಬಳಿ ಬಿಜೆಪಿ ಅಧ್ಯಕ್ಷ ಮಾಗಲು ಪ್ರವೀಣ್, ಮುಖಂಡರಾದ ಖಾಂಡ್ಯ ಪ್ರವೀಣ್, ವೆಂಕಟೇಶ್ ಒಳಗೋಡು, ನಂದೀಶ್, ರಘು ಉಜ್ಜಯಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net