

ತಲ್ಲೂರ: ಅಸಹಾಯಕರು ಹಾಗೂ ಬಡ ಜನರ ಸೇವೆಯೇ ಮಹಾರುದ್ರಪ್ಪ ಉಪ್ಪಿನ ಅವರ ಮುಖ್ಯ ಧ್ಯೇಯವಾಗಿದೆ. ಅವರ ಸರಳ, ಸಜ್ಜನಿಕೆ ವ್ಯಕ್ತಿತ್ವ ಮಾದರಿಯಾಗಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ವಿರೂಪಾಕ್ಷ ಮಾಮನಿ ಹೇಳಿದರು.
ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಯಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಹಾರುದ್ರಪ್ಪ ಉಪ್ಪಿನ ಅವರ 61ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಯಿ ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರಪ್ಪ ಉಪ್ಪಿನ ಮಾತನಾಡಿ, ಅಭಿಮಾನಿಗಳು, ಹಿತೈಷಿ ಹಾಗೂ ಸ್ನೇಹಿತರ ಪ್ರೀತಿ-ವಿಶ್ವಾಸಕ್ಕೆ ನಾನು ಚಿರಋಣಿ. ಎಲ್ಲರ ಹಾರೈಕೆೆ ನನ್ನ ಜನ ಸೇವೆಗೆ ಶಕ್ತಿಯಾಗಿದೆ ಎಂದು ತಿಳಿಸಿದರು. ಮಹಾರುದ್ರಪ್ಪ ಉಪ್ಪಿನ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಸಸಿ ನೆಟ್ಟು, ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.
ತೊರಗಲ್ಲಮಠದ ದೀಪಕಸ್ವಾಮಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ, ಜಿಪಂ ಮಾಜಿ ಸದಸ್ಯ ಅಜಿತ್‌ಕುಮಾರ ದೇಸಾಯಿ, ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಉದ್ಯಮಿ ಮಡಿವಾಳಪ್ಪ ಬಿದರಗಡ್ಡಿ, ಎ.ವಿ.ಇಂಗಳೆ, ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಜಗದೀಶ ಕೌಜಗೇರಿ, ರಫೀಕ್ ದೀಲಾವರನಾಯ್ಕ, ಸತೀಶ ಬಡಿಗೇರ, ರಾಜು ಕಗದಾಳ, ಕ್ಕೀರಪ್ಪ ಉಪ್ಪಿನ, ಅನಿಲ ಸರದಾರ, ಮಲ್ಲಿಕಾರ್ಜುನ ಗಾಣಿಗೇರ, ವೀರಪ್ಪ ಬೆನಕಟ್ಟಿ, ಆನಂದ ಲಕ್ಕನ್ನವರ, ಬಸವರಾಜ ಸರದಾರ, ಪ್ರಕಾಶ ಬಸಿಡೋಣಿ ಇತರರಿದ್ದರು.