

ಹೆಬ್ರಿ: ಸದಾ ದೇವರ ಚಿಂತನೆ ಮಾಡಿದಲ್ಲಿ ಮನುಷ್ಯನಲ್ಲಿ ಕೋಪ, ಉದ್ವೇಗ ಕಡಿಮೆ ಆಗಲು ಸಾಧ್ಯ. ದೇವಸ್ಥಾನಗಳಲ್ಲಿ ಭಕ್ತಿಯಿಂದ ಭಜನೆ ಮಾಡುವುದೂ ಒಂದು ಸೇವೆ ಎಂದು ವಿದ್ವಾನ್ ಸಗ್ರಿ ಆನಂದತೀರ್ಥ ಉಪಾಧ್ಯಾಯ ಹೇಳಿದರು.
ಅಖಿಲ ಭಾರತ ಮಾಧ್ವ ಮಹಾಮಂಡಲ, 30ನೇ ತತ್ವಜ್ಞಾನ ಸಮ್ಮೇಳನ-ಪೆರಣಂಕಿಲ-2025 ಪೂರ್ವಭಾವಿಯಾಗಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಂಕಲ್ಪದಂತೆ 108 ತತ್ವಜ್ಞಾನ ಮಹೋತ್ಸವದ ಅಂಗವಾಗಿ ಮುನಿಯಾಲು ಕಾಡುಹೊಳೆ ಶ್ರೀ ಜಂಗಮೇಶ್ವರ ಸಾನ್ನಿಧ್ಯದಲ್ಲಿ ತತ್ವಜ್ಞಾನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಜೆಕಾರು ವಲಯ ಬ್ರಾಹ್ಮಣ ಸಂಘ ಸದಸ್ಯರಿಂದ ವಿಷ್ಣುಸಹಸ್ರನಾಮ, ಸಂಕೀರ್ತನೆ, ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವಿದ್ವಾನ್ ಗುಡ್ಡೆಯಂಗಡಿ ರಾಘವೇಂದ್ರ ಭಟ್, ಆಡಳಿತ ಮೊಕ್ತೇಸರ ಚಿರಂಜಿತು ಅಜಿಲ, ಅಜೆಕಾರು ವಲಯ ಬ್ರಾಹ್ಮಣ ಸಂಘ ಅಧ್ಯಕ್ಷ ನಾಗರಾಜ ಪುತ್ರಾಯ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸಂದೀಪ್ ನಾಯಕ್ ಉಪಸ್ಥಿತರಿದ್ದರು. ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿದರು.